STORYMIRROR

Daivika ದೈವಿಕಾ

Romance Tragedy Fantasy

3.5  

Daivika ದೈವಿಕಾ

Romance Tragedy Fantasy

ಓ ನನ್ನ ನಲ್ಲೆ, ನೀ ಎಲ್ಲಿರುವೆ..?

ಓ ನನ್ನ ನಲ್ಲೆ, ನೀ ಎಲ್ಲಿರುವೆ..?

1 min
288


ನನ್ನ ಕಡೆಗೆ ಗಮನ ಇಲ್ಲವೆ,

ನಿನ್ನ ದಾರಿ ನಾ ಕಾದು ಕುಳಿತಿರುವೆ,

ಎಲ್ಲಿರುವೇ..? ನೀ ಹೇಗಿರುವೆ..?

ನೂರಾರು ಆಸೆ ಮನದಲ್ಲಿ ಹೊತ್ತು

ಮುಗಿಲಷ್ಟು ಪ್ರೇಮ ಕಣ್ಣಲ್ಲಿ ಇಟ್ಟು

ನೀ ಬರೋ ದಾರಿಗೆ ಕಾದಿರುವೆ

ಓ ನನ್ನ ನಲ್ಲೆ ನೀ ಎಲ್ಲಿರುವೆ..?


ಸುಳಿವೊಂದು ನೀಡು ನೀ ಮರೆಯಲ್ಲಿ ಅವಿತು

ಕಣ್ಣಸನ್ನೆ ಮಾಡು ನೀ ನನ್ನನ್ನೆ ಕುರಿತು

ಆ ಬಾನು ಈ ಭೂಮಿ ಎಲ್ಲಾ ಖಾಲಿ,

ನಕ್ಷತ್ರ ನೀನಿರದೆ ಈ ನನ್ನ ಬದುಕಲ್ಲಿ

ಮನದಾಳದ ತುಮುಲು,ನಗೆಮಲ್ಲಿಗೆ ಹೊನಲು

ನಿನ್ನೊಂದಿಗೆ ಹಂಚಿಕೊಳ್ಳಲು

ನಿನ್ನ ಮಡಿಲಲಿ ಮಗುವಂತೆ ಮಲಗಲು

ನೀ ಬರೋ ದಾರಿಗೆ ಕಾದಿರುವೆ

ಓ ನನ್ನ ನಲ್ಲೆ ನೀ ಎಲ್ಲಿ

ರುವೆ..?


ನೀನೆಷ್ಟು ಕ್ರೂರಿ ಈ ಬಡಪಾಯಿಯ ಕೋರಿ

ಬರಲಾಗದೆ ದೂರದಲಿ ಆಯಾಗಿ ಎಲ್ಲಿರುವೆಯೇ

ಈ ಬಂಡ ಹೃದಯದಲಿ ಕನಸಾಗಿ ಸೇರಿ

ಹಗಲಿರುಳು ಏಕಾಂತವ ನೀಡಿರುವೆಯೇ

ಇದು ಸರಿಯೇನು ಹೇಳು ನಿನಗು ಸಹ

ಬಿಗಿದಪ್ಪು ಬಳಿಬಂದು ಒಂದು ಸಲಾ....

ಓ ನನ್ನ ನಲ್ಲೆ ನೀ ಎಲ್ಲಿರುವೆ..?


ಅದೆಷ್ಟೆಷ್ಟು ಕವಿತೆಗಳ ಬರೆದಿರುವೆನೋ?

ಅದೆಷ್ಟಷ್ಟು ಆಸೆಗಳ ತೆರೆದಿರುವೆನೋ?

ಮನದೊಳಗೆ ಹೂದೋಟ ಮಾಡಿರುವೆನು

ಕನಸುಗಳ ಹೂಗಳನು ಬೆಳೆದಿರುವೆನು

ಒಲವಿಂದ ಕಾದಿರುವೆ ಆ ಹೂಗಳನು

ನೀ ಬರುವ ದಾರಿಯಲಿ ಹಾಸುವೆನು

ಕಾತುರ ತಾಳದೆ ನಸುನಗುತಿಹೆನು

ಓ ನನ್ನ ನಲ್ಲೆ ನೀ ಎಲ್ಲಿರುವೆ..?


Rate this content
Log in

Similar kannada poem from Romance