ಸಂಗೀತ ಸುಧೆಯಲ್ಲಿ ಪ್ರೀತಿಯ ಸವಿಯು
ಸಂಗೀತ ಸುಧೆಯಲ್ಲಿ ಪ್ರೀತಿಯ ಸವಿಯು
ಈ ನನ್ನಾ ಜೀವನದಲ್ಲಿ
ನಿನ್ನವಳಾಗಬೇಕೆಂಬ ಆಸೆಯಲಿ
ದಿನವೂ ಕಲಿಯುತ್ತಿರುವೆ ತರಗತಿಯಲ್ಲಿ
ನೀನೇ ಇಷ್ಟಾ ಪಟ್ಟ ಸಂಗೀತವ
ಪ್ರೀತಿಯ ಅಲೆಯಲ್ಲಿ
ಸ್ವರವೆಂಬ ರಥವೇರಿ
ತಾಳವೆಂಬ ಚಕ್ರಸೇರಿ
ರಾಗವೆಂಬ ಅಶ್ವದಲ್ಲಿ
ಬರುವೆಯಾ ಮಹಾರಾಜನಾಗಿ
ಅರ್ಪಿಸುವೆ ನಿನಗೆ ಪ್ರೀತಿಯನ್ನು
ಸಂಗೀತ ಸುಧೆಯಲ್ಲಿ
ತೇಲಲು ತಯಾರಿಲ್ಲ
ಮುಳುಗಲು ಮನವಿಲ್ಲಾ
ನಿನ್ನಾ ಕೈ ಇಡಿದು ದಡ ಸೇರುವಾಸೆ
ಬರುವೆಯಾ ಜೊತೆಯಾಗಿ
ಸಂಗೀತದ ನಾವಿಕನಾಗಿ
ಹೃದಯದ ಬಡಿತ ಹೆಚ್ಚಾಗುತ್ತಿದೆ
ನದಿಯ ಅಲೆಯ ರಭಸಕ್ಕೆ
ಆದರೂ, ಹೃದಯ ಕಾಯುತ್ತಿದೆ
ನಿನ್ನಾ ಆಗಮನಕ್ಕೆ
ಬರಬೇಕು ನೀನು ನನ್ನಾ ನೋಡಲು...
ಬಂದೆ ಬರುವೆ ಎಂಬ ನಿರೀಕ್ಷೆಯಲಿ ಕಾಯುತ್ತಿದೆ
ನನ್ನೀ ಮನವು... ಸಪ್ತಸ್ವರಗಳಲ್ಲಿ
ಸ ರಿ ಗ ಮ ಪ ದ ನಿ ಸ
ಸ್ವರವು ಹೇಳುತ್ತಿದೆ
ರಾಗವು ನಗುತ್ತಿದೆ
ತಾಳವು ಕುಣಿಯುತ್ತಿದೆ
ಸಂಗೀತದ ನಿನ್ನಾ ಮಹಾರಾಜ ಬಂದ ಎಂದು...
ಬೀಸೋ ತಂಗಾಳಿಯು ಹೇಳುತ್ತಿದೆ
ನೀ ಬಂದೆ ಎಂದು
ನನ್ನಾ ಮನವು ಕೂಗುತ್ತಿದೆ
ನನ್ನವ ಬಂದ ಎಂದು
ಕಾಡಿಸುತ್ತಿರುವೆಯಾ ಮಹಾರಾಜನೇ...???
ಬಂದರು ಬಾರದ ಹಾಗೇ...!!!
ಕಣ್ಣಿಗೆ ಕಾಣದಿದ್ದರೂ.,
ಮನಸ್ಸು ಹೇಳುತ್ತಿದೆ
ನೀನೇ ನನ್ನವನ್ನೆಂದು...
ನೀ ಬರುವೆ ಎಂದು ಗೊತ್ತಿತ್ತು
ಅದಕ್ಕಾಗಿ ತಂದಿರುವೆ ಈ ಒಬ್ಬಟ್ಟು
ಜೊತೆಯಾಗಿ ತಿನ್ನೋಣ ಕೂತು ಈ ಹೊತ್ತು
ಸಂಗೀತ ಸುಧೆಯಲ್ಲಿ ಪ್ರೀತಿಯ ಸವಿಚೆಲ್ಲಿ