STORYMIRROR

Ramachandra sagar

Romance

4  

Ramachandra sagar

Romance

ಉತ್ತರವು ನೀನಾಗುವೆ

ಉತ್ತರವು ನೀನಾಗುವೆ

1 min
591


ತುಸು ಮೆಲ್ಲನೆ ತುಸು ಮೆಲ್ಲನೆ 

ನಗುತ ಸಾಗುವೆಯ ನನ್ನೊಲವೆ..

ಅವಸರದ ನನ್ನೆದೆಯ ಕನಸಿಗೆ

ಪ್ರೇಮದ ಉತ್ತರವು ನೀನಾಗುವೆ...


!!ತುಸು ಮೆಲ್ಲನೆ!!


ಒಲುಮೆಯ ಸೌಜನ್ಯದ ಹೆಜ್ಜೆಗೆ 

ನಾ ಸಂಭ್ರಮದಿ ಜೊತೆಯಾಗುವೆ

ಒಯ್ಯಾರದ ಬಿನ್ನಾಣದ ನಡಿಗೆಗೆ 

ನಾ ಮೋಹದಿ ಹಿಂಬಾಸುವೆ..


!!ತುಸು ಮೆಲ್ಲನೆ!!


ತೂಗುವ ತಂಗಾಳಿಯು ರಮಿಸಿದೆ

ಸ್ನೇಹದ ಹಾದಿಗೆ ಹಾರೈಸಿದೆ

ಉಲ್ಲಾಸದ ಅಲೆಯು ಬೀಸುತಿದೆ

ಪ್ರೀತಿಯ ಹೆಸರೊಂದೆ ಕೇಳುತಿದೆ..


!!ತುಸು ಮೆಲ್ಲನೆ!!


ಉನ್ನಾದದ ಬಯಕೆಯು ಉದಿಸುತಿದೆ

ಹೃದಯದ ಕರೆಗೆ ದನಿಗೂಡಿಸಿದೆ

ಸಂತಸದ ಮಳೆಯು ಸುರಿಯುತಿದೆ

ಹೊಸ ಬಾಳಿಗೆ ಸ್ವಾಗತ ಕೋರುತಿದೆ..


!!ತುಸು ಮೆಲ್ಲನೆ!!


ವಾತ್ಸಲ್ಯದ ತಾಳವು ಝೇಂಕರಿಸುತಿದೆ

ಮಮತೆಯ ಬಂಧಕೆ ಹಾತೊರೆದಿದೆ

ತುಸು ಮೆಲ್ಲನೆ ತುಸು ಮೆಲ್ಲನೆ 

ನಗುತ ಹಿಂತಿರುಗುವೆಯ ನನ್ನೊಲವೆ..


!!ತುಸು ಮೆಲ್ಲನೆ!!


ವೈಭವದ ಬಾಳಲ್ಲಿ ನೀ ಸುಖವೆ ಕಾಣುವೆ

ಒಲುಮೆಯ ಉಯ್ಯಾಲೆಯಲಿ ಹಿತವಾಗುವೆ

ನೋವಿಲ್ಲದ ಬಾಳಿಗೆ ಸಾಕ್ಷಿಯಾಗುವೆ

ಅನುರಾಗದ ಗೀತೆಗೆ ದನಿಯಾಗುವೆ..




Rate this content
Log in

Similar kannada poem from Romance