ನೆನಪು ಕಾಡುತಿದೆ
ನೆನಪು ಕಾಡುತಿದೆ
ನೆನಪು ಕಾಡುತಿದೆ..
ಈ ಖಾಲಿ ಖಾಲಿ ಎದೆಯೊಳಗೆ
ಗೆಳತಿ ನಿನದೇ ನೆನಪು ಕಾಡುತಿದೆ..(ಪ)
ಈ ವಿರಹದ ತಾಪದ ಮಳೆಯೊಳಗೆ
ಕಣ್ಣೀರಿನ ಗುಡುಗು ಬಡಿಯುತಿದೆ
!!ನಿನದೇ ನೆನಪು ಕಾಡುತಿದೆ!!
ಕೆಂಪೇರಿದ ಚೆಂದದ ಬಾನಿನೊಳಗೆ
ಅಕ್ಕರೆಯ ಚೆಲುವೆಯ ರಂಗೆಲ್ಲಿದೆ
ಮಮತೆಯ ಮನ್ನಣೆಯ ಆವಾರದೊಳಗೆ
ವಾತ್ಸಲ್ಯದ ವಾಹಿನಿಯ ಮೋಹವೆಲ್ಲಿದೆ
!!ನಿನದೇ ನೆನಪು ಕಾಡುತಿದೆ!!
ಈ ಹುಣ್ಣಿಮೆಯ ತಂಪು ರಾತ್ರಿಯಲಿ
ನೀನಿಲ್ಲದೇ ಹಾದಿಯು ಕಂದರವು
ಈ ಯಾತನೆಯ ರೌದ್ರತೆಯಲಿ
ಮನದ ನೋವು ಕಠೋರವು
!!ನಿನದೇ ನೆನಪು ಕಾಡುತಿದೆ!!
ಹೂಬನದ ಅನುಪಮ ಹಾದಿಯಲ್ಲಿ
ನೀನಿಲ್ಲದೆ ಬಾಳಿಗೆ ಹಿತವೆಲ್ಲಿ
ತಂಗಾಳಿಯ ಆತುರದ ಸುಳಿದಾಟದಲ್ಲಿ
ಪ್ರೀತಿಯ ಹೂವಿಗೆ ನಲಿದಾಟವೆಲ್ಲಿ
!!ನಿನದೇ ನೆನಪು ಕಾಡುತಿದೆ!!
ಕಾತರದ ಹೃದಯದ ಕೋಣೆಯೊಳಗೆ
ಒಲುಮೆಯ ಹೆಜ್ಜೆಯನು ಇಡುವೆಯ
ಹಂಬಲದ ಕಡಲಿನ ಆಳದೊಳಗೆ
ಸೌಖ್ಯದ ಸವಿಜೇನು ತುಂಬುವೆಯ..