Revolutionize India's governance. Click now to secure 'Factory Resets of Governance Rules'—A business plan for a healthy and robust democracy, with a potential to reduce taxes.
Revolutionize India's governance. Click now to secure 'Factory Resets of Governance Rules'—A business plan for a healthy and robust democracy, with a potential to reduce taxes.

Ramachandra sagar

Tragedy Inspirational Others

4  

Ramachandra sagar

Tragedy Inspirational Others

ಬಂಧಿಯಾಗಿದ್ದೇವೆ...!

ಬಂಧಿಯಾಗಿದ್ದೇವೆ...!

1 min
92



ಹಲಾಲುಕೋರರ ಹರಾಮಿ ಕೃತ್ಯಗಳಿಗೆ

ಎದೆಗಾರಿಕೆಯಿಂದ ಸುಳ್ಳೆಂದು ನುಡಿಯದೆ

ಹಗಲು ದರೋಡೆಕೋರರ ಅಟ್ಟಹಾಸಕೆ ಬೆದರಿ

ನರಸತ್ತ ನಪುಂಸಕರಂತೆ ಮೌನಿಯಾಗಿದ್ದೇವೆ

ನಮ್ಮದೇ ಹೇಡಿತನದ ಕೋಟೆಯೊಳಗೆ ಬಂಧಿಯಾಗಿದ್ದೇವೆ..


ಕುಟಿಲರ ಬೆತ್ತಲೆಗೊಳಿಸಿ ಸತ್ಯವ ಗೆಲ್ಲಿಸದೆ

ಆಮಿಶದ ಬಲೆಯೊಳಗೆ ಸೆರೆಯಾಗಿದ್ದೇವೆ

ಗಾಂಪರನ ಹೆಡ್ಡದಲ್ಲಿ ಸಚ್ಚರಿತನ ಮುಳುಗಿಸಿ

ನಮಗೆ ನಾವೆ ಕಂದರದಲ್ಲಿ ಶವವಾಗುತ್ತಿದ್ದೇವೆ.


ದುರಹಂಕಾರದಿ ಮೆರೆವ ಅಸುರರಿಗೆ

ಬೆದರಿ ಬೆಂಡಾಗಿದ್ದೇವೆ

ಕ್ಷಣ ಕ್ಷಣವೂ ಸಾಯುವುದಕ್ಕೆ ಹೆಸರಾಗಿದ್ದೇವೆ

ಬೆವರು ಹನಿಗಳಿಗೆ ಫಲಕಾಣದೆ

ಭಿಕ್ಷೆ ಬೇಡುವುದಕ್ಕೆ ಶರಣಾಗಿದ್ದೇವೆ


ಜಾತಿ, ಧರ್ಮಗಳ ಹೆಸರಲಿ

ಅಧಿಕಾರದ ಅಮಲೇರಿದ ಬೆಪ್ಪರಲಿ

ಅಭಿವೃದ್ಧಿಯು ಗೌಣವಾಗಿರಲು

ಕಾಂಕ್ರೀಟ್ ಕಾಡುಗಳೇ ಜನ್ಮತಳೆಯುತಿರಲು

ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ

ಮುಕ್ತಿ ಕರುಣಿಸುವ ವೀರ ಉದಯಿಸುವನೆ?


ನಿಜನಾಯಜಕನು ಜನ್ಮತಳೆದು

ಸತ್ಯದ ಕತ್ತಿ ಹಿಡಿದು

ದಮನಿತರ ಸಂಕೋಲೆಯನು ಕಳಚುವನೆ?

ಸತ್ಯದ ಕಿರಣವು ಬೆಳಗುವುದೆ?




Rate this content
Log in

Similar kannada poem from Tragedy