ಭಾವ- ಪಲ್ಲಟನೆ**
ಭಾವ- ಪಲ್ಲಟನೆ**


ಅದೆಷ್ಟು ಹಬ್ಬಗಳು ಬಂದು ಹೋಗಿಲ್ಲ!
ನೀನಿಲ್ಲದೆ ಕಳೆದಿದ್ದವು ಮೋಜಿಲ್ಲದೆ..
ಎಣ್ಣೆ ಕಮರು, ಸಿಹಿಯಡಿಗೆ ಇಲ್ಲದೇ.
ಬಾಳೆಲೆಗಂಟಿದನ್ನವ ಉಂಬುವರಿಲ್ಲದೆ.
ಸಧನವಿದು ನಿಶಬ್ಧವಿಂದು ಸದ್ದಿಲ್ಲದೆ.
ಕದನವಿತ್ತೊಂದು ಅಂದು ಹದ್ದಿಲ್ಲದೇ..
ಧಮನಿಯಲಿ ಬಿಸಿರಕ್ತದಾಟದ ಹಬೆಗೆ
ಅಧುಮಿಟ್ಟುಕೊಂಡ ಹಸೀ ಭಾವಬಗೆ.
ಕಪ್ಪು ತೀಡಿದ ಕಣ್ಣ ಹನಿ ಕರಗಿಸಿತ್ತು..
ಅಪ್ಪಿ ಕುಳಿತ ರೆಪ್ಪೆಯದಕೆ ಸಾಂತ್ವನ..
ಸುಪ್ತ ಭಾವಕೆ ಹಿತವೆನಿಪ ಸನ್ನಾಟ.
ಶುಷ್ಕ ನಗೆಯಲೂ ನಿನ್ನ ಹುಡುಕಾಟ.
ಹುಣ್ಣಿಮೆ ಚಂದವೋ ನೀ ಚಂದವೋ
ಕಣ್ಣೆವೆಗೆ ಎಲ್ಲವೂ ವೇಧ್ಯ ಬೆಳಕಿನಲ್ಲಿ.
ಕತ್ತಲಾವರಿಸಿದಾಗ ಬಿತ್ತಲಾಗದಿಲ್ಲಿ..
ಮುರಿದ ಮನವದು ತೂಗುಯ್ಯಾಲೆ..
ಕೆಲವೊಮ್ಮೆ ನಿಂತೆ ನೀ ಮನದಲ್ಲಿ ..
ಹಲವು ಬಗೆ ಹುಚ್ಚೆಬ್ಬಿಸಿದ ಧಗೆ..
ಎಲ್ಲವೂ ಕನಸಾಗಿದ್ದಂತೂ ನಿಜವೇ
ಕಲ್ಲರಳಿ ಹೂವಾಗುವುದು ಹೇಗೆ?..
ಮತ್ತೇಕೆ ಬರೆದೆ ಹೀಗೆ? ಎಂಬ ಪ್ರಶ್ನೆಗೆ..
ಹತ್ತಾರು ಉತ್ತರ ಬರೆಯಲಾಗದೆನಗೆ..
ಮತ್ಯಾರೋ ಬರೆದ ಕವನಕೆ ಒಣನಗೆ..
ಬೇಡವೆಂದರಿತು ಉಸುರಿದೆ ಬರಿದೆ !
ಜಯಶ್ರಿ ಹಳ್ಳೂರ..
( ಕೆಲವು ಭಾವನೆಗಳು ಅಂತರಾಳದ ಅನಿಸಿಕೆಯಷ್ಟೇ. ಅವಕ್ಕೆ ಪದಗಳ ಬಳಸಿ ಅರ್ಥ ಕಲ್ಪಿಸುವ ಪ್ರಯತ್ನ ನನ್ನದು. ಪರಿಸ್ಥಿತಿ, ಭ್ರಮೆಗಳು ಮನಸಿನ ಹೊರ, ಒಳಗಿನ ವಲಯಗಳು. ಬೇಕುಬೇಡಗಳ ಪರಿಧಿಯನು ಮೀರಿ ಹರಿವ ಭಾವನೆಗಳಿಗೆ ಕವಿತೆಯೊಂದು ಕಡಿವಾಣವಷ್ಟೇ. ಅಲ್ಲಿಗೆ ನಿರಾಳತೆ. ಏನನ್ನೋ ಪೂರ್ತಿಗೊಳಿಸಿದ ಸಮಾಧಾನ ಅಂತ ಅನಿಸ್ತು..ನಿಮಗೂ ಹಾಗೇ ಅನಿಸುತ್ತಾ..? ಮನಸು ಬಿಚ್ಚಿ ಹೇಳಿ ಆಯ್ತಾ.)..😊