STORYMIRROR

Surabhi Latha

Abstract Romance Others

4  

Surabhi Latha

Abstract Romance Others

ಹುಚ್ಚು ಹುಡುಗ

ಹುಚ್ಚು ಹುಡುಗ

1 min
956


ಬಿಚ್ಚು ಮನಸಿನ ಹುಚ್ಚು ಹುಡುಗ ನೀನು 

ನಿನ್ನ ಮರೆತು ಹೇಗಿರಲಿ ನಾನು 

ಹೊಸದಾದ ಕನಸು ನಿನ್ನಿಂದ ಕಂಡೆ 

ಇಂದು ನಿನ್ನೊಲವನು ಉಂಡೆ 


ಆಡುವ ಮಾತೆಲ್ಲವೂ ಬಲು ಮಧುರ 

ಹೇಳಿದೆ ನಿನ್ನ ಹೆಸರನೇ ನನ್ನ ಅಧರ 

ಬರೆಯಲು ಮನದಲ್ಲಿ ಕಾತರ 

ಎಂದು ಬರಲಿ ನಿನ್ನ ಹತ್ತಿರ 


ಒಂದೊಂದು ಹೆಜ್ಜೆಯ ಗುರುತು, 

ಇಡುವೆ ಹೆಜ್ಜೆಯ ನಿನ್ನೊಡನೆ ಬೆರೆತು 

ಇರಲಿ ದೂರ, ಸಾಗುವ ದಾರಿ 

ನಾ ಬರುವೆ ಜೊತೆಯಾಗಿ ಸೇರಿ 


ಕಷ್ಟ ಸುಖಗಳು ನಮಗೆ ಬೇವು ಬೆಲ್ಲ 

ಹಂಚಿ ಕೊಳ್ಳುವೆ ಕೇಳೋ ನಲ್ಲ 

ನಿನ್ನ ಬೊಗಸೆಯಲ್ಲಿರಲಿ ನನ್ನ ಮೊಗವು 

ನಾ ಬಗೆದು ಕೊಡುವೆ ಎಲ್ಲಾ ಸುಖವು 


ಬಿಚ್ಚು ಮನಸಿನ ಹುಚ್ಚು ಹುಡುಗ ನೀನು 

ನಿನ್ನ ಮರೆತು ಹೇಗಿರಲಿ ನಾನು 



Rate this content
Log in