ಚುಕ್ಕಿ
ಚುಕ್ಕಿ
ಎರಡೂ ನಿಹಾರಿಕೆ ಬಾನಿನಂಚಲಿ ನಾಚುತ,
ಭುವಿಯ ಮರೆತು ನಾಚಿ ನಗುತಿತ್ತು...
ನಯನ ಹಾಗೆ ಸುಮ್ಮನೆ ಚಂದಿರನ ಮೋಹಕೆ ಸಿಲುಕಿ,
ಒಮ್ಮೆಲೆ ನೋಡಬಯಸಿತ್ತು...
ನಡೆಯುತಿತ್ತು ಚುಕ್ಕಿಗಳ ಪ್ರೀತಿಯ ಮೊದಲ ಭೇಟಿ,
ಪರಸ್ಪರ ನಾಚಿ ನೀರಾಗಿತ್ತು...
ಚಂದಿರನಾಜ್ಞೆಯಂತೆ ಮದುವೆಯ ಸೂಚನೆ ನೀಡಲಾಗಿತ್ತು,
ಆದರೆ ಬೆಳಕು ಹರಿದು ತಾರೆಗಳ ಪ್ರೀತಿ ಭಗ್ನವಾಯ್ತು...