ಮತ್ಸಪುಳಕ
ಮತ್ಸಪುಳಕ


ಕೈಹಿಡಿದು ನಿನ್ನೊಡನೆ ಕಿರುಬೆರಳ ವಶಪಡೆದು,
ನಡೆವಾಸೆ ನದಿಯ ಸುಂದರ ತಟದಲಿ...
ಭುವಿಯಂಚಿನವರೆಗೂ ನಡೆಯಬೇಕು ನಮ್ಮ ಚರಣ,
ಬಡಪಾಯಿ ಹೃದಯಕೆ ಸಾಟಿಯಿಲ್ಲ ಬಯಕೆಯಲಿ...
ಮತ್ಸರ ಮಾಡಿದೆ ತಾತ್ಸಾರ ನಾಚಿ ನಗುತಲೆ,
ಜೊತೆಯಾಗಿ ಕಂಡಾಗ ನಗುವೊಂದು ಮೂಡಿರಲು ಮನದಲಿ...
ನಿನ್ನ ನೋಟದ ಪ್ರಭೆಗೆ ಮನಃದ,
ಲಜ್ಜೆ ನವಿಲಾಗಿ ಹಾಡಿ ನಲಿದಿರಲು
ಚಂದಿರ ಬಂದನು ತೇಲುತ ಬೆಳದಿಂಗಳಲಿ...