ಹೃದಯ
ಹೃದಯ
ಕಂಬನಿಯು ಅಳುತ್ತಿದೆ ಕಾರಣವಿಲ್ಲದೆ,
ಅರಿದರೆ ದೊರೆಪುದೆ ಮನಃಕೆ ಮನಃದ ಬೇಡಿಕೆ...
ಹೃದಯ ಚೂರಾಗಿದೆ ನೋಡೆಯ,
ಬಡಿಯುತ್ತಿದೆಯಾದರೂ ಬಯಸಿದೆ
ನಿನ್ನ ಪ್ರೀತಿಯ ಮೊಹರು ಕನ್ನಿಕೆ...
ಭಾವನೆಯ ಕಣ್ಣೀರ ಧಾರೆಯಲಿ ಏಕಾಂಗಿ ನಾವಿಕನಾಗಿರುವೆ,
ನೆನೆದಿದೆ ನಯನ ಧರೆಗಿಳಿದಾಗ ಮಳೆಯ ಮೊಳಕೆ...
ಪ್ರತಿ ಬಡಿತದ ಸರದಿಯ ನಡುವೆ ನೆನೆಪೆ ನಿನ್ನನೆ,
ದಯೆ ತೋರಿ ಕರ್ತವ್ಯ ಪಾಲಿಸು ಮನಸೆ ತ್ಯಜಿಸಿ ಪ್ರೀತಿ ಆಳ್ವಿಕೆ...