ಚೆಲುವೆ
ಚೆಲುವೆ
ಗುಳಿಕೆನ್ನೆ ನಡುವೆ ಜೋಕಾಲಿಗೊಡವೆ,
ಅಂದದ ಜೋಲೆಯು ಸು-ನಾದಕೆ ಲೀಲೆ...
ಕೇಶದ ಚೆಲುವೆ ಒಮ್ಮಲೆ ನಗುವೆ,
ಕೊಂಡೊಯ್ವೆ ಮನಃವ ಸುಮ್ಮನೆ ಬಾಲೆ...
ನಯನದ ನೋಟ ಮನಸಿಗೆ ಮಾಟ,
ತಡೆದು ನಿಲ್ಲಿಸಿದೆ ಭಾವನೆಯ ಕೂಟ
ಅಚ್ಚರಿಯಾಡಿದೆ ಉಯ್ಯಾಲೆ...
ನಮಿಸುವೆ ನಾನು ನೀ ಬಿಡಿಸುವ ಪ್ರತಿ ಚಿತ್ರಕಲೆಯ,
ಮೊಗದ ಗುಳಿಗೆನ್ನೆ ಹೆಚ್ಚಿಸಿದೆ ನಿನ್ನ ಸೌಂದರ್ಯದ ನೆಲೆ...