ಅವಳು
ಅವಳು


ಚಿತ್ತಾರೆಯ ತಾರೆ ನಗುವ ಬೆಳದಿಂಗಳ ಮೋರೆ,
ಸೋತು ಮರಳಾದೆ ಹೇಳು ಕೊಂಚ ನೀನಾರೆ...
ಕಣ್ಸನ್ನೆ ಕೊಂಚ ನಿಲ್ಲಿಸಿದೆ ಬಡಿಯೊ ಹೃದಯವ ಬೆಡಗಿ,
ಪ್ರಶ್ನೆಯ ಉತ್ತರವೆ ನೀಡಿದೆ ಹೃದಯಕೆ ಕರೆ...
ಸೋತು ಸಮ್ಮನೆ ನಿನ್ನ ನೆನೆವೆನೆ ಬಯಸದೆ ಬಂದ ವಲ್ಲಭೆ,
ಜೊತೆಗಿರುವ ಮುದ್ದು ಧ್ರುವತಾರೆ...
ಹೃದಯದ ಭಾಗವು ಬಯಸಿದ ಭಾಗ್ಯವು ನೀನೆಯೆ,
ಬಡಿಯುವುದು ಹೃದಯ ಪ್ರತಿಬಾರಿ ಪ್ರಥಮ ನೋಟ ಬಡಿತ ರೀತಿಯೆ...