ನವರಾತ್ರಿ ಸಂಪ್ರದಾಯ
ನವರಾತ್ರಿ ಸಂಪ್ರದಾಯ
ಚೈತ್ರಮಾಸದಲ್ಲಿ ವಸಂತ ನವರಾತ್ರಿ
ಅಶ್ವಿಜಮಾಸದಲ್ಲಿ ಶರನ್ನವರಾತ್ರಿ
ನವರಾತ್ರಿ ತರುವುದು ಜಗಕೆ ನವತ್ವ
ದೇಶದಾದ್ಯಂತ ತಿಳಿದಿದೆ ನವರಾತ್ರಿ ಮಹತ್ವ
ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ
ಆಚರಿಸುವ ಹಬ್ಬ ಎಲ್ಲಾ ಧರ್ಮದವರಿಗೂ
ಲಕ್ಷ್ಮಿ ಸರಸ್ವತಿ ಪಾರ್ವತಿಯರೇ ಆರಾಧಿತರು
ಧನಾತ್ಮಕ ಜ್ಞಾನಾರ್ಜಿತ ಮರ್ದನ ದೇವಿಯರು
ನವರಾತ್ರಿ ದಶವತಾರದಲ್ಲಿ ಕಂಗೊಳಿಸುವ ದೇವಿ
ಕಣ್ಣು ತುಂಬಿ ಭಕ್ತಿಯಿಂದ ಸ್ತುತಿಸುವ ಭಾವಜೀವಿ
ಕರ್ನಾಟಕದ ನಾಡದೇವಿ ಕೊಲ್ಕೋತ್ತದ ದುರ್ಗಿ
ಮೈಸೂರು, ಹಂಪಿ, ಕೊಡಗಿನಲ್ಲಿ ದಸರಾ ಸುಗ್ಗಿ
ಪ್ರತಿ ಮನೆಗಳಲ್ಲಿ ಬೊಂಬೆಗಳ ಸಂಭ್ರಮಶೃಂಗಾರ
ಪ್ರತಿದಿನ ಬೊಂಬೆ ಬಾಗಿನದ ನಾನಾ ಉಪಹಾರ
ಎಷ್ಟೊಂದು ಸುಂದರ ನಮ್ಮೂರ ದಸರಾ
ಅರಮನೆ ಸುತ್ತು ಮುತ್ತಲು ವಿದ್ಯುದಲಂಕಾರ
ವಿಜಯದಶಮಿ ಜಂಬುಸವಾರಿ ಮೆರವಣಿಗೆ
ನಾನಾ ವೇಷ ಭೂಷಣ ತೊಟ್ಟು ಕುಣಿತದ ನಡಿಗೆ
ಕರ್ನಾಟಕ ವೈಭವ ಸಾರುವ ಟ್ಯಾಬುಲೋಗಳು
ಸಂಗೀತ ಕಲೆ ನೃತ್ಯ ವರ್ಣಿಸುವ ಬೊಂಬೆಗಳು
ನೂರು ಕಣ್ಣು ಸಾಲದು ಈ ದಸರಾ ನೋಡಲು
ನೂರಾರು ಮನ ಸಾಲದು ಈ ಉತ್ಸವ ಬಣ್ಣಿಸಲು