ನಿನ್ನೊಲವ ಮನದಲ್ಲಿ
ನಿನ್ನೊಲವ ಮನದಲ್ಲಿ


ನಿನ್ನೊಲವ ಮನದಲ್ಲಿ ಸಿಹಿ ಪ್ರೀತಿ ನಾ ಬಯಸುವೆ
ನಿನ ಮನದ ಸಂಗಾತಿ ಎಂದೆಂದೂ ನಾನಾಗುವೆ
ಸುಮ್ಮನೆ ಹಾಗೆ ಒಪ್ಪಿಗೆಯ ನೀಡು ನನಗೆ
ನಿನ್ನ ಮಾತು ಕೆಳುವೆನು ಕೊನೆಯಾವರೆಗೆ
ದಯಮಾಡಿ ನಿ ದೂರಾಗದೆ
ಅವಕಾಶವಾ ಒಮ್ಮೆ ನಿ ನಿಡುಬಾ
ನಿನ್ನ ಹೃದಯದ ಮನೆಯ ಒಡಲಲ್ಲಿ ನಾನು ಇರುವೆ
ತಂಗಾಳಿಯಂತೆ ನನ್ನ ಆಲಿಸೆಯಾ
ವಿರಹವ ತಡೆಯುವಂತೆ ಮನದಾಸೆ ನೀಗುವಂತೆ
ಸಿಹಿ ಮುತ್ತ ಒಮ್ಮೆ ನಿ ನಿಡುವೆಯಾ
ತಣ್ಣನೆ ಗಾಳಿ ತಪ್ಪಲು ನನಗೆ
ಬೆಚ್ಚನೆ ಅಪ್ಪುಗೆ ನಿ ನಿಡು ಬಾ
ನಿನ ಪ್ರೀತಿಯ ಇನಿಯನಾಗುವೆ
ನಿನ್ನೊಡಲಲಿ ಹಾಯಾಗಿರುವೆ
ನಿನ್ನ ಮನದ ಪ್ರೀತಿ ನನಗಾಗಿ ಇರಲಿ ರೀತಿ
ಇನ್ನೆಂದು ಬಿಡದೇ ನನ್ನ ಒಲವಲ್ಲಿ
ಇಬ್ಬರೂ ಸೇರಿ ಹೀಗೆ ಜೊತೆಯಾಗಿ ಇರುವೆವು ಹಾಗೆ
ಕೊನೆವರೆಗೂ ನಮ್ಮ ಮೌನದ ಮನೆಯಲ್ಲಿ
ಮನಸಿನ ಮಾತು ನಿನೊಮ್ಮೆ ಅರಿತು
ಮೌನದಿ ಕವಿತೆ ನಿ ನಾಗು ಬಾ
ನಿನ್ನ ಪ್ರೀತಿಯ ಇನಿಯನಾಗುವೆ
ನಿನ್ನೊಡಲಲಿ ಹಾಯಾಗಿರುವೆ