ಬಾಳ ಸಂಗಾತಿ
ಬಾಳ ಸಂಗಾತಿ
ಗೆಳೆಯನಾಗಿ ತಾ ಬಂದ
ಜೀವನ ಸಂಗಾತಿಯಾದ
ನನ್ನ ಹೃದಯ ಸಾಮ್ರಾಜ್ಯಕೆ
ಒಲವಿನ ಒಡೆಯನಾದ
ಸಖನಾಗಿ ಪ್ರೇಮಿಯಾಗಿ
ತವರ ಸುಖ ಮರೆ ಮಾಡಿದ
ನನ್ನ ಮನದ ಅರಮನೆಯಲಿ
ತನ್ನ ಪ್ರತಿಬಿಂಬ ಮೂಡಿಸಿದ
ಮಂದಹಾಸದ ಮೋಹನ
ಸರಸ ಸಲ್ಲಾಪದ ರಸಿಕ
ಕಪ್ಪು ಕಣ್ಗಳ ಆ ಮಿಂಚು
ನೋಟದಲಿ ಅಚ್ಚು ಮೆಚ್ಚು
ಸಂಯಮ ಶೀಲದ ಮಾತುಗಾರ
ನಗು ಮುಖದ ಸೊಗಸುಗಾರ
ಆತ್ಮವಿಶ್ವಾಸದ ಸ್ಫುರದ್ರೂಪಿ
ಅವನೇ ನನ್ನ ಬಾಳ ಸಂಗಾತಿ