ಬಾಳೊಂದು ಸುಂದರ ಕಾವ್ಯ
ಬಾಳೊಂದು ಸುಂದರ ಕಾವ್ಯ


ಹೊಂಗನಸುಗಳ ಸಾಕಾರವೆಂಬಂತೆ
ನನ್ನೊಲವಿನರಮನೆಗೆ ನೀ ಬಂದೆ
ಬಾಳು ಬಂಗಾರವಾಯಿತು ನಿನ್ನೊಲುಮೆಯಂತೆ
ಬದುಕಿಗೆ ಹೊಸ ಹೆಸರ ನೀ ಬರೆದೆ!!
ಯಾವ ಜನ್ಮದ ಮೈತ್ರಿಯೋ ನೀ ಬಂದೆ
ಒಲವ ಬಂಧನವಾಯಿತು ನಮ್ಮ ನಡುವೆ
ನೋವಿರಲಿ ನಲಿವಿರಲಿ ನಾನೆಂದೂ ಜೊತೆಗಿರುವೆ
ತುಂಬು ಪ್ರೀತಿಯ ನಾ ಮೊಗೆಮೊಗೆದು ಕೊಡುವೆ!!
ಹೃದಯವೇ ಕೇಳು ಈ ಉಸಿರು ನೀನೆನಗೆ
ನಮ್ಮ ಪ್ರೀತಿಯ ಬಂಧ ಗಟ್ಟಿಯಾಗಿರಲಿ ಕೊನೆವೆರೆಗೆ
ಯಾವ ದೇವರ ವರವೋ ನಾ ಕಾಣೆ ಈ ಬೆಸುಗೆ
ಬಾಳೊಂದು ಸುಂದರ ಕಾವ್ಯ ನೀನಿರಲು ಜೊತೆಗೆ!!