STORYMIRROR

ರಾಜ ರತ್ನ

Romance Classics Others

4  

ರಾಜ ರತ್ನ

Romance Classics Others

ಹೃದಯದ ಪ್ರೀತಿ ತೇರು...

ಹೃದಯದ ಪ್ರೀತಿ ತೇರು...

1 min
363

ಪ್ರಿಯ ಸಖಿ ನಾ ಕರೆದು ಬಿಡಲೇ 

ನಿನ್ನೆಸರನ್ನೊಮ್ಮೆ ನೀನು ಒಪ್ಪಿದರೆ

ಸಂತೋಷದಿಂದ ಇಳಿದು ಬಿಡಲೇ

ಹೃದಯದಲ್ಲೊಮ್ಮೆ ನೀ ಮೆಚ್ಚಿದರೆ..


ಕಣ್ ಕಣ್ ಸಲಿಗೆಗೆ ಸೇತುವೆ ಕಟ್ಟಿ

ಮನಸುಗಳಿಗೆ ಕಾಮನ ಬಿಲ್ಲ ಬಿಟ್ಟಿ

ಹೃದಯದರಮನೆಯ ಕದವ ತಟ್ಟಿ

ಜನುಮದ ಜೋಡಿಯಾಗಿ ಹುಟ್ಟಿ..


ಮನಸಲ್ಲಿ ಭಾವ ತುಂಬಿ ನೂರಾರು

ಆಸರೆಯ ಕೊಡುವವಳು ನೀನಾರು

ಸ್ಪೂರ್ತಿ ತುಂಬಲು ಹಸೆಮಣೆಯೇರು

ಕಾಯುತಿದೆ ಹೃದಯದ ಪ್ರೀತಿ ತೇರು..


ಹೃದಯದ ಹಾಡು ಕೇಳು ಬಾ ಸುಮ್ಮನೆ

ದೂರದಲಿ ನಿಂತೆ ನಾಚಿಕೆಯಲಿ ಬಿಮ್ಮನೆ

ಅರಿಯಲಾರೆಯಾ ಈ ಮನಸಿನ ಭಾವನೆ

ಉಯ್ಯಾಲೆಯಾಗಿ ಹೃದಯಂಗಮ ಕಾಮನೆ...


ಕಣ್ಮುಂದೆ ನಿಂತು ಕಾಡುವೆ ಕರೆದರೆ ಬರದಿರುವೆ

ಕರೆಯದೆ ಕನಸಲೂ ಕಣ್ ಹೊಡೆದು ಕಾಡುವೆ

ಕೈಗೆ ಸಿಗದೆ ಆಟ ಆಡಿಸಿ ದೂರ ದೂರ ಓಡುವೆ

ಮನಸು ಮನಸಲ್ಲಿ ನವಿರಾದ ಭಾವ ತೋರುವೆ...


Rate this content
Log in

Similar kannada poem from Romance