ಜೀವಕೆ ಜೊತೆಯಾಗುವೆಯಾ
ಜೀವಕೆ ಜೊತೆಯಾಗುವೆಯಾ


ಮಸ್ತಕವೆಂಬ ಪುಸ್ತಕದಲ್ಲಿ
ನಿನ್ನ ಕಂಡಾಗಿನಿಂದಿನ ಸಿಹಿ ಕ್ಷಣಗಳ
ಒಲವಗೀತೆಯ ಬರೆದಿರುವೆ....
ಹೃದಯದ ಶಾಖೆಯಲಿ
ನಿನ್ನೆಸರಿನ ಖಾತೆಯ ತೆರೆದು
ಪ್ರೀತಿಯ ಠೇವಣಿಗಾಗಿ ಕಾಯುತಿರುವೆ...
ಕನಸ್ಸಿನಲ್ಲೂ ಕಾಡುವ ನೀನು
ಹಗಲಲ್ಲಿ ನಾ ಎದುರಿಗೆ ಬಂದಾಗ
ಕಂಡರೂ ಕಾಣದಂತೇಕೆ ನಟಿಸುತ್ತಿರುವೆ...
ಇನ್ನಾದರೂ ನಿನ್ನ ನಟನೆಯ ನಿಲ್ಲಿಸಿ
ನನ್ನ ಹೃದಯದ ಖಾತೆಯಲಿ ಪ್ರೀತಿಯ ಠೇವಣಿದಾರನಾಗಿ
ನಿನಗೆಂದು ಬರೆದ ಒಲವಗೀತೆಯ ಹಾಡಿ
ಈ ಜೀವಕೆ ಜೊತೆಯಾಗುವೆಯಾ....
ನನ್ನೆಸರ ಮುಂದೆ ನಿನ್ನೆಸರ ಸೇರಿಸಿ
ಈ ಉಸಿರಿಗೆ ಉಸಿರಾಗುವೆಯಾ.....