ಮುಂಗುರುಳು
ಮುಂಗುರುಳು
ತೂಗುತ್ತಿರುವ ನಿನ್ನ ಮುಂಗುರುಳು
ಕೆನ್ನೆ ಸವರಿ ನಿಂತಿದೆ
ಬೆರಳಾಡಿಸಿದಾಗ ನೀ ಅದರಲಿ
ನಾಚಿ ಮೇಲೆ ಪುಟಿದಿದೆ!!
ತಿರುಹಿದಷ್ಟು ನೀ ಅದನು
ಮತ್ತೆ ಮತ್ತೆ ಛೇಡಿಸಿದೆ
ತಂಗಾಳಿಯಲಿ ಉಯ್ಯಾಲೆಯಾಡಿ
ನಿನ್ನ ಕಂಗಳ ಚುಂಬಿಸಿದೆ!!
ಬೆರಳು ಕೂದಲ ಸವರಿದಂತೆ
ನಿನ್ನ ಗಲ್ಲವ ಸವರಿದೆ
center">ಉಸುರಿದಾಗ ಎದೆಯುಬ್ಬಿಸಿ
ಚಂಗನೆ ಹಾರಿ ಕುಣಿದಿದೆ!!
ಅರ್ಧ ಮುಚ್ಚಿ ನಿನ್ನ ಕಣ್ಣನು
ಕಣ್ಣು ಮುಚ್ಚಾಲೆ ಆಡಿದೆ
ಬೆಳ್ಳಿ ಉಂಗುರದಂತೆ ಮೇಲೆ ಕೆಳಗೆ
ಜಾರುವಾಟ ಆಡಿದೆ!!
ನಿನ್ನ ನಡುವಿನಂತೆ ಅದು
ಅತ್ತ ಇತ್ತ ಬಳುಕುತಿದೆ
ಭ್ರಮರದಂತೆ ಹಾರಿ ಹಾರಿ
ಹಾಲುಗೆನ್ನೆಯ ಮುತ್ತಿಕ್ಕಿದೆ!!