STORYMIRROR

ಹೃದಯ ಸ್ಪರ್ಶಿ

Romance

4.0  

ಹೃದಯ ಸ್ಪರ್ಶಿ

Romance

ಕದಿಯುವಾಸೆ

ಕದಿಯುವಾಸೆ

1 min
24.4K


ಕದಿಯುವಾಸೆ ಚಂದದೊಂದು ಮನವ..,

ಕೊನೆವರೆಗೂ ಪ್ರೀತಿಯಿಂದ ಬಾಳಲು...!! 

ಹೃದಯ ಎಂಬ ಚಿಕ್ಕ ಅರಮನೆಯಲ್ಲಿ.., 

ಮಹಾರಾಣಿಯಾಗಿರಲು..


ಕಣ್ಮುಚ್ಚಿದರೇ ಸಾಕು ಎಲ್ಲೆಲ್ಲೂ

ನೀನೇ ಕಾಣಬೇಕು..

ನನ್ನ ಜಗತ್ತು ನೀನೇ ಆಗಬೇಕು.

ನಿನ್ನ ಮುದ್ದಾದ ಪ್ರೀತಿಗೆ

ನಾನೇ ಒಡತಿಯಾಗಬೇಕು..


ಬಯಸುವೆ ನನ್ನ ಜೀವನ

ಹಾದಿಯುದ್ದಕ್ಕೂ ನಿನ್ನ...

ನಡುದಾರಿಯಲ್ಲಿ ಎಂದೂ

ಕೈ ಬಿಡದಿರು ಎನ್ನ...


ಕನಸಿನೂರಿನ ಗೆಳೆಯಾ

ನೀ ನನ್ನ ಪ್ರೀತಿಯ ಒಡೆಯ..

ನಿನಗಾಗೆ ಮೀಸಲು ನನ್ನೀ ಹೃದಯ.. 


ನೂರೆಂಟು ಕನಸುಗಳ ಕಟ್ಟಿ

ಬದುಕಿ ತೋರಿಸಬೇಕು ಈ ಜಗಕೆ..

ಮನದ ಮಾತುಗಳ ಹಂಚಿಕೆ

ಈ ವೇದಿಕೆ...


ನಿನ್ನ ಮನಸ್ಸು ಪ್ರೀತಿಯ ಕಡಲು..

ಪ್ರೀತಿಯ ಮಳೆಯಾಗಿ ನೀನು ಬರಲು..

ಸ್ವಾಗತಿಸುವೆ ನಿನ್ನನ್ನು,

ಹೃದಯದ ಬಾಗಿಲು ತೆರೆದು..!!


ಭಾವಗಳ ಹೂವರಳಿ

ಕಲ್ಪನೆಯ ದುಂಬಿ ಬಂದು

ಕವಿತೆ ಹಾಡಿದೆ ಮನಸು..!

ನೀ ಬಂದು ಸೇರು..,

ನನ್ನ ಹೃದಯದ ಅರಮನೆಗೆ..

ನೀ ಜೊತೆಗಿದ್ದರೆ ಸಾಕು..

ನನ್ನೊಲವೇ...


      

    


Rate this content
Log in

Similar kannada poem from Romance