ನಿನ್ನೆ ನೋಡಿದ ಹಾಗೆ ಮತ್ತೆ ಕಾಡಿದೆ ನೆನಪು
ನಿನ್ನೆ ನೋಡಿದ ಹಾಗೆ ಮತ್ತೆ ಕಾಡಿದೆ ನೆನಪು
ನಿನ್ನೆ ನೋಡಿದ ಹಾಗೆ ಮತ್ತೆ ಕಾಡಿದೆ ನೆನಪು
ಮೈ ಮನವು ಭೋರ್ಗೆರೆವ ಕನಸ ಕಡಲು
ಚಿತ್ತ ಭಿತ್ತಿಯಲೆಲ್ಲ ನೀನೆ ಮುತ್ತಿದೆ ಮತ್ತೆ
ಇಹದ ಪರಿಯನೆ ನಾನು ಮರೆತು ನಿಂತೆ
ಏನು ಮಾಡಿದೆ ಮೋಡಿ ನನ್ನೇ ಕಾಡುವ ಗೆಳತಿ
ಏಕಾಂತದಲ್ಲೆಲ್ಲಿ ಮಧುರ ಹೊನಲೇ
ಬೆನ್ನತ್ತಿ ಬಾರದಿರು ಹೀಗಂತೂ ಕಾಡದಿರು
ಪ್ರೀತಿ ಕಲಿಸಿದ ನಲ್ಲೇ ನನ್ನ ಒಲವೇ
ಮೀಟಿ ತನುವನ್ನೆಲ್ಲ ಹಳೆಯ ಕಾಡುವ ಮೋಹ
ಆವರಿಸಿ ಮನವೆಲ್ಲ ಮಧುರ ನೋವ
ಪ್ರೇಮ ಸಂಪದದಲ್ಲೇ ಬದುಕು ಸಾರ್ಥಕವೆಲ್ಲ
ಇಹುದು ಬಾಳಿನ ಅರ್ಥ ಸತ್ವವೆಲ್ಲ