STORYMIRROR

ಹೃದಯ ಸ್ಪರ್ಶಿ

Romance Classics Others

4  

ಹೃದಯ ಸ್ಪರ್ಶಿ

Romance Classics Others

ಒಲವಿನ ಸೆಳೆತ

ಒಲವಿನ ಸೆಳೆತ

1 min
302

ಮನಸಿನ ಸಾಗರದಲಿ ಒಲವಿನ ಅಲೆ ಎದ್ದಿದೆ

ಕಣ್ಣು ಮುಚ್ಚಿದರೂ ಕಾಡುವಂತೆ ನಿನ್ನದೇ

ಪ್ರತಿಬಿಂಬ ಸುಳಿದಾಡಿದೆ...


ಯಾಕೆ ಹೀಗೆ ಕಾಡುವೆ ಗೆಳತಿ...?

ಬರಬಾರದೇ ಒಮ್ಮೆ ಬಳಿಗೆ..

ತರಬಾರದೆ ಕಾದು ಬಸವಳಿದ ಮನಕೆ ಹೊಂಗೆ ತಂಪು

ನನ್ನೊಳಗಿನ ತುಮುಲ, ಹೊಯ್ದಾಟ

ಅರ್ಥವಾಗದೆ ನಿನಗೆ..?


ಒಮ್ಮೆ ಕಣ್ಣಲ್ಲಿ ಸಿಹಿ ಕನಸಾಗಿ ಬಾ

ಮತ್ತೊಮ್ಮೆ ಹೃದಯದಿ ಸವಿ ನೆನಪಾಗಿ ಬಾ

ಮಗದೊಮ್ಮೆ ತಂಪು ತಂಗಾಳಿಯಲಿ

ಬೆರೆತ ಪರಿಮಳದಂತೆ ತೇಲಿ ಬಾ..

ಹೇಗಾದರೂ ಬಾ.. ಒಟ್ಟಿನಲ್ಲಿ ಬಳಿ ಬಾ...


ಕಣ್ಣ ರೆಪ್ಪೆಯಲಿ ಬಚ್ಚಿಟ್ಟು ಪ್ರೀತಿಸುವೆ

ಹೃದಯದ ಗುಡಿಯಲಿ ಪ್ರೇಮ ದೇವತೆಯಾಗಿಸಿ

ಭಕ್ತಿ ಭಾವದಿ ಆರಾಧಿಸುವೆ..


#LoveLanguage



Rate this content
Log in

Similar kannada poem from Romance