ಮನವು ಬಯಸಿದೆ ನಿನ್ನನೇ
ಮನವು ಬಯಸಿದೆ ನಿನ್ನನೇ
ಮನಸ್ಸಾಗಿದೆ ಈ ಹೃದಯಕೆ
ನಿನ್ನ ಮೇಲಿಂದು..
ಒಂಟಿತನ ಕಾಡುವ ಸಮಯ
ಕೇಳ ಬಯಸಿದೆ ನಿನ್ನ ದನಿಯ
ಅರಿವಿರದ ವೇಳೆಯಲಿ
ನೀನಾದೆ ನನ್ನ ಮನದೊಡತಿ
ಬೆಚ್ಚಗಿನ ನಿನ್ನ ಅಪ್ಪುಗೆ
ಬಯಸಿದೆ ಈ ಚಳಿಯಲಿ..
ಈಗೀಗ ನನ್ನ ಕನಸುಗಳು
ಶುರುವಾಗುವುದೇ ನಿನ್ನ
ನೆನಪಿನ ಜಾತ್ರೆಯಲಿ..
ಮನಗಳ ನಡುವಿನ
ಸೇತು ನಾನಾಗಲು ಬಯಸಿ
ಪ್ರೇಮಿಯಾಗಿರುವೆ ನಾ
ನಾನೆಂಬ ಅಹಂಕಾರ ಮರೆತು!