ಮನದ ಪುಟಗಳಲ್ಲಿ..
ಮನದ ಪುಟಗಳಲ್ಲಿ..
ಬಿಳಿಯ ಹಾಳೆಯ ಮೇಲೆಲ್ಲಾ
ನೀಲಿ ಶಾಯಿಯ ಚಿತ್ತಾರ
ಮನದ ಪುಟಗಳೆಲ್ಲಾ
ಅರಿಯದ ಭಾವಗಳ ಚಿತ್ತಾರ
ಸಿಹಿ ಕಹಿ ಭಾವಗಳು ಹಲವಾರು
ಮನದಲ್ಲಿ ಮೂಡಿ ಮರೆಯಾದ
ಯೋಚನೆಗಳೇ ಸಾವಿರಾರು..
ಜೀವನ ಬರಿ ಇಷ್ಟೇ ಎಂಬ ಪುಕಾರು
ಮಾತಿಗೂ ಮುನ್ನ ಮೌನದ ರಾಜ್ಯ
ಮನಸ್ಸು ಮಾಡಿದೆ ನಾಳಿನದೇ ಧ್ಯಾನ
ವಾಸ್ತವದ ಬದುಕಿನ ನೆನಪಿಲ್ಲ
ಭವಿಷ್ಯದ ಚಿಂತೆ ಮರೆತಿಲ್ಲ,.