ಪ್ರೀತಿ ನೆಟ್ಟವಳು
ಪ್ರೀತಿ ನೆಟ್ಟವಳು
ಸಾಗರದ ಶಕ್ತಿಗೆ ಅದ್ಬುತ ಯುಕ್ತಿಗೆ
ಭೋರ್ಗರೆದು ಬೆಳೆದ ಜನ್ಮದಾತೆಗೆ
ತೊತ್ತೆಂದು ಜರಿದರೂ ಮುತ್ತೆಂದು ಕರೆದರೂ
ಆದವಳು ಸಬಲೆ ನೀನಲ್ಲವೆ
ಸಬಲೆಯೋ ನೀ ಅಬಲೆಯೋ...|
ಚಂದನವ ಕೊರೆದು ತೇದೊಡೆ
ನೊಂದೆನೆಂದು ಕಂಪ ಬಿಟ್ಟಿತೇ
ಸಾಧನೆಯ ಶಿಖರಕ್ಕೆ ಮುಕುಟ
ಹೆಣ್ಣಲ್ಲವೆ ಸಾಧನೆಯ ಕಣ್ಣಲ್ಲವೆ
ಎತ್ತರದ ಮನೆಯವಳು ನೀನಲ್ಲವೆ...|
ತವರು ಬಿಟ್ಟವಳು ಪ್ರೀತಿಯ ನೆಟ್ಟವಳು
ಹಗಲಿರುಳು ಕೈ ಹಿಡಿದು ನಡೆದಾಳು
ಹೆಗಲಿಗೆ ಹೆಗಲಾಗಿ, ಹಿರಿಯರಿಗೆ ತಲೆಬಾಗಿ
ಬಾಳುವ ನಿನ್ನ ಪಯಣದ ಮಾಯೆ ನಾನರಿಯೆ
ನಗುತಿರು ನೀನು ಮೌನದ ನಡುವೆ...|
ಗೆಜ್ಜೆಯ ಕಾಲಲಿ ಹೆಜ್ಜೆಯ ಗುರುತಿಟ್ಟು
ಬದುಕನು ಮೆಟ್ಟಿ ಮನೆಯನು ಅರಿತಾಕೆ
ಬರೆವುದೇನು ಸೋಜಿಗ ತಿಳಿಯಲಾರದೀ ಜಗ
ಸಾವಿರದ ಮನೆಗಳಲಿ ಮನೆಯ ಮಾಡಿದೆ
ಮನುಕುಲವೇ ತಾಯೆಂದು ನಿನ್ನ ಪೂಜಿಸಿದೆ...|
