STORYMIRROR

Lakshmi Kanth L V

Classics Fantasy Others

4  

Lakshmi Kanth L V

Classics Fantasy Others

ಒಲವಿನ ಬೆಳಕು

ಒಲವಿನ ಬೆಳಕು

1 min
260

ಬೆಳಕಿನ ಹಬ್ಬ ಒಲವಿನ ಬೆಳಕು ಚೆಲ್ಲುತಿರಲಿ

ಮೈಗೊಡವಿ ಅಂಧಕಾರ ದೂರ ತೊಲಗಲಿ

ಅಜ್ಞಾನ ತೊಡೆದು ಜ್ಞಾನ ದೀವಿಗೆ ಹಚ್ಚುತಿರಲಿ

ಸಂಬಂಧಗಳ ಬಂಧಕೆ ನವಸ್ಪರ್ಶ ಸದಾ ತುಂಬಿರಲಿ


ಋತುಕಾಲದ ಮಂಕುತನ ಸರಿಸಿ ದೀಪಗಳು ಬೆಳಗಲಿ

ಭಾವ ಬಿರಿದು ಸೇತುವೆ ಬೆಸೆದು ಬಾಂಧವ್ಯ ಬಿಗಿಯಾಗಲಿ

ಮಾನವ ಚೈತನ್ಯಕೆ ಪ್ರಕೃತಿ ನಮ್ಮ ಜೊತೆಯಾಗಿರಲಿ

ಕತ್ತಲ ಬಸುರಿಗೆ ಬೆಳಕಿನ ಕಿರಣ ಹೆತ್ತ ಜ್ಯೋತಿಯಾಗಲಿ


ಸಮರಸದ ಬೆಳಕು ಹರಿದು ಸೊಗಸಿನ ಬದುಕು ಸಾಗಲಿ

ಮತಬೇಧ ತೊರೆದು ನಲಿವ ಜೀವನ ನಮ್ಮದಾಗಲಿ

ಸಗ್ಗದ ಸಂಭ್ರಮ ತುಂಬಿ ಜೀವಭಾವ ನೆಲೆಯಲಿ

ದೀಪದ ರಂಗವಲ್ಲಿ ಎಲ್ಲೆಡೆ ಹರಡಿ ಬೆಳಕ ಹೂವ ಚೆಲ್ಲಲಿ


ಕಾಲಚಕ್ರ ಉರುಳಿ ಬದುಕಿನ ಹೊಸತನ ರೂಪುಗೊಳ್ಳಲಿ

ಬಾಳಿನ ಸೆಲೆಯಾಗಿ ಬೆಳಕು ನಮ್ಮ ಜೊತೆ ಸೇರಲಿ

ಒಲವಿನ ರಾಶಿ ತುಂಬುತ್ತಾ ಮಮತೆಯ ಮಡಿಲಾಗಲಿ

ಭಕ್ತಿಯ ಸಿಂಚನವಾಗಿ ಹಬ್ಬದ ಗರಿಮೆ ಸದಾ ಮಿಂಚಲಿ


Rate this content
Log in

Similar kannada poem from Classics