STORYMIRROR

Lakshmi Kanth L V

Children Stories Inspirational Children

4  

Lakshmi Kanth L V

Children Stories Inspirational Children

ಅಕ್ಷರ ದೀವಿಗೆ ಹಚ್ಚೋಣ

ಅಕ್ಷರ ದೀವಿಗೆ ಹಚ್ಚೋಣ

1 min
434

ಅಲ್ಲೆಲ್ಲೋ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕೇಳುವ ಕೂಗು

ಇದು ಬೀದಿ ಮಕ್ಕಳ ತೀರದ ವ್ಯಥೆಯ ಹಸಿವಿನ ಕಥೆ

ನಾಗರೀಕ ಸಮಾಜದಿಂದ ದೊರಕದ ಸ್ಫೂರ್ತಿಯ ಸೆಲೆ

ಮಕ್ಕಳ ದಿನಾಚಾರಣೆಯಾದರೂ ದೊರಕದ ಮುಕ್ತಿ


ನಮ್ಮ ನಾಡಲಿ ಸಹಾಯ ಹಸ್ತ ನೀಡುವ ಮನಸುಗಳಿವೆ

ಆದರೇನು ಬೀದಿಗಳಲ್ಲಿ ಅದೇ ಹರಕು ಮುರುಕು ಬಟ್ಟೆ

ಬೇಸರ ತರಿಸುವ ಹೊಣೆಗೇಡಿತನ ಮನಸ್ಸುಗಳ ನಡುವೆ

ಸಿಗುತ್ತಿಲ್ಲ ಮಕ್ಕಳ ದಿನಾಚರಣೆಗೆ ನಿಜವಾದ ಅರ್ಥ


ಮೃದು ಮನಸ್ಸಿನ ಮಕ್ಕಳಿಗೂ ನಿಲ್ಲದ ತಾರತಮ್ಯ

ಅನಾಥರೆಂಬ ಕಾರಣಕ್ಕೆ ಸಿಗದ ಹನಿ ಕನಿಕರ

ಭವಿಷ್ಯದ ಶಿಕ್ಷಣವೇ ಇಂತವರಿಗೆ ಮರೀಚಿಕೆ

ದಿನಾಚರಣೆ ಅರ್ಥ ತಿಳಿಯದೆ ಬಾಡಿವೆ ಹೂಗಳು


ಬಸ್‌ತಾಣವೇ ನೆಲೆಯಾದ ಇವರಿಗೆ ಖಾಯಂ ನೆಲೆ ಸಿಗಲಿ

ಶಾಲೆಯ ದರ್ಶನ ಭಾಗ್ಯ ಇನ್ನಾದರೂ ಸಿಗುವಂತಾಗಲಿ

ಕನಸುಗಳಿಲ್ಲದ ಅನಾಥ ಮಕ್ಕಳ ಬಾಳನು ಬೆಳಗೋಣ

ಹೆಗಲ ಜೋಳಿಗೆ ತೆಗೆದು ಅಕ್ಷರ ದೀವಿಗೆ ಹಚ್ಚೋಣ


Rate this content
Log in