Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Abstract Drama Tragedy

4.7  

Arjun Maurya

Abstract Drama Tragedy

ಅಭಿಸಾರಿಕೆ

ಅಭಿಸಾರಿಕೆ

1 min
336


ನೆರಕೆ ಗೋಡೆ

ಪ್ರಪಂಚದೊಳಗಿನ ಆಕೆ

ಎಂದಿನಂತಿರಲಿಲ್ಲ

ಬೆಳೆದಿದ್ದಳು..

ಮೈ ತುಂಬುವಷ್ಟು

ರತ್ನಾಭರಣಗಳೊಂದಿಗೆ

ಮನೆ ತುಂಬಾ ತುಂಬುವಷ್ಟು..

ತುಂಬಿ ಹೀರುವಷ್ಟು..||

ವಿಶಾಲ ಮನೆ ಕಟ್ಟುವಷ್ಟು

ಬೆಳೆದಿದ್ದಳು..

ಮನೆ ದೊಡ್ಡದಾಗಿಸಿದ್ದಳು..

ಅವಳು ಬೆಳೆದಷ್ಟೇ

ವಿಶಾಲವಾಗಿ..||

ಹೊಲಸು ನಾಲಿಗೆ

ಎಲ್ಲೆಂದರಲ್ಲಿ ||

ಕೈ ತುಂಬಾ ದುಡ್ಡು

ನೀಡುತ್ತಿದ್ದವರು

ನೆಂಟರಾಗುತ್ತಿದ್ದರು..

ರಾತ್ರೋರಾತ್ರಿ

ಬಂಧುಗಳಾಗುತ್ತಿದ್ದರು ||

ದುಡ್ಡಿಲ್ಲದವ ಅವನು

ಮೂಲೆಯಲ್ಲಿ

ಅನಾಥನಂತೆ ಬಿದ್ದಿದ್ದನು..

ಆಗೋ ಈಗೋ ಅನ್ನುವಂತೆ

ಗಂಡನೆಂಬ ನೆಪದಲಿ ||

ಅವಳಿಗೆ

ಕೊರತೆಯಿರಲಿಲ್ಲ..

ಕೈ ತುಂಬಾ ಬಳೆಗೆ

ಹಣೆ ತುಂಬಾ ಕುಂಕುಮಕೆ

ಮುಡಿ ತುಂಬಾ ಹೂವಿಗೆ..

ವ್ಯಾನಿಟಿಯೊಳಗಿನ ದುಡ್ಡಿಗೆ

ಮತ್ತು

ಹೆಸರಿಗೆ..||

ವೇಶ್ಯೆಯೆಂಬೆಸರು

ಇಷ್ಟವಿರಲಿಲ್ಲ ಆಕೆಗೆ |

ಕೈ ತುಂಬಾ ದುಡ್ಡಿಗೆ

ಸೆರಗ ಹಾಸಿದರೂ

ವೇಶ್ಯೆಯಲ್ಲ ಆಕೆ..

ಅಭಿಸಾರಿಕೆ ||

ಸೆರಗ ಮಂಚಕೆ

ಬೇಕಿರಲಿಲ್ಲ

ರೆಡ್ ಲೈಟ್ ಬೀದಿಗಳು

ಸಾಕಿತ್ತು ಕೆಲಕಾಲದ

ಕತ್ತಲೆ ಕೂಪಗಳು

ಮತ್ತು

ಕೆಲ ನೆಪಗಳು..

ಅಂದದ ನಾರೀ‌ಮಣಿ

ಅಭಿಸಾರಿಕೆ ||



Rate this content
Log in

Similar kannada poem from Abstract