STORYMIRROR

Prajna Raveesh

Abstract Classics Inspirational

4  

Prajna Raveesh

Abstract Classics Inspirational

ಮಳೆಯ ಸಿಂಚನ ಬಾನಾಡಿಗಳ ಕಂಪನ

ಮಳೆಯ ಸಿಂಚನ ಬಾನಾಡಿಗಳ ಕಂಪನ

1 min
210

ನೀರಿಲ್ಲದೇ ಭೂತಾಯಿಯೊಡಲಿನ ದಾಹ ತೀರಿಸಲು

ಆಗಸದಲಿನ ಕಪ್ಪು ಕಾರ್ಮುಗಿಲು ಆಸೆ ಹುಟ್ಟಿಸಿದೆ

ಸಕಲ ಜೀವರಾಶಿಗಳ ಮನದ ತುಡಿತ ಅರಿವಾಗಿರಲು

ಬಿಸಿಲ ಬೇಗೆಯಲಿರುವ ಇಳೆಗೆ ಮಳೆಯ ಸ್ಪರ್ಶವಾಗಿದೆ


ರಭಸದಲಿ ಬೀಸುವ ಗಾಳಿಯ ಅಬ್ಬರಕೆ ಕುಣಿದಿದೆ ಮನ

ಆಗಸದಲಿನ ಕೋಲ್ಮಿಂಚಿನ ಬೆಳಕಿಗೆ ಹೆದರಿವೆ ಪಕ್ಷಿಗಳು

ಸಿಡಿಲಿನ ಶಬ್ದವು ಬೆಚ್ಚಿ ಬೀಳಿಸಿದೆ ತೊಟ್ಟಿಲ ಕಂದನ

ಭೂಮಿಗಾಗಿದೆ ಖುಷಿ, ಸಂಭ್ರಮದ ರಸಮಯ ಕ್ಷಣಗಳು


ಭೀತಿಯಿಂದ ಪಿಳಿಪಿಳಿ ಕಣ್ಣು ಮಾಡಿದ ಕರುಳ ಕುಡಿಯ

ಎತ್ತಿ ಮುದ್ದಾಡಿ ಬಾನಾಡಿಗಳ ತೋರಿಸಲು ಅವಳು

ಕಂದನು ಬೀರಿತು ಹಕ್ಕಿಗಳ ಕಂಡು ನಸು ನಗೆಯ

ಗಾಳಿಯ ರಭಸಕೆ ಅಲುಗಾಡುತಿವೆ ಮರದ ಕೊಂಬೆಗಳು


ರೆಂಬೆಯಲಿ ಕೂತ ಮರಿ ಹಕ್ಕಿಗಳು ಭೀತಿಯಲಿರಲು

ತಾಯಿ ಹಕ್ಕಿಯು ತನ್ನ ಮರಿಗಳಿಗೆ ಧೈರ್ಯ ತುಂಬಿದೆ

ತನ್ನ ಮನದ ಭಾವವನ್ನು ಅಮ್ಮನು ಕಂದನಿಗೆ ಹೇಳಲು

ಕಂದನ ಕೆಂದುಟಿಯಲ್ಲಿ ಮುಗ್ಧ ನಗೆಯೊಂದು ಮೂಡಿದೆ


ಮರದ ಕೊಂಬೆಯಲಿರುವ ಬಾನಾಡಿಗಳು ಧೃತಿಗೆಡದೆ

ಏನೇ ಬಂದರೂ ಒಟ್ಟಾಗಿ ಎದುರಿಸುವೆವೆಂಬ ಛಲದಲಿ

ರಭಸದ ಗಾಳಿಗೂ ಅಂಜದೇ ಮರದ ಮೇಲೆ ಕೂತಿದೆ

ಒಗ್ಗಟ್ಟನ್ನು ಮಾನವ ಈ ಹಕ್ಕಿಗಳ ನೋಡಿ ಕಲಿಯಬೇಕಿದೆ!!


Rate this content
Log in

Similar kannada poem from Abstract