STORYMIRROR

Prajna Raveesh

Romance Classics Others

4  

Prajna Raveesh

Romance Classics Others

ಒಲವೇ ನಮ್ಮ ಬದುಕು..!!

ಒಲವೇ ನಮ್ಮ ಬದುಕು..!!

1 min
20

ಸಪ್ತಸಾಗರದಾಚೆಗಿನ ಋಣಾನುಬಂಧವು

ಸಪ್ತಪದಿಯೊಳಗಿನ ಏಳು ಹೆಜ್ಜೆಯಲಿಹುದು

ಕಷ್ಟ ಸುಖಗಳಲಿ ಜೊತೆಯಾಗಿ ನಡೆಯುವೆವು

ಏಳೇಳು ಜನ್ಮದ ಬಂಧ ಮೂರು ಗಂಟಲ್ಲಿಹುದು


ಬಾಳಪಯಣದಲಿಹುದು ಕಲ್ಲು ಮುಳ್ಳುಗಳು

ಕಲ್ಲು ಮುಳ್ಳುಗಳೂ ಹೂವ ಹಾಸಿಗೆಯಾಯಿತು

ನಿನ್ನ ಒಡನಾಟದಿಂದ, ನಿನ್ನ ಪ್ರೀತಿ ಮಾತುಗಳು

ಮನವ ಮುಳ್ಳಲ್ಲಿದ್ದ ಗುಲಾಬಿಯಂತೆ ಅರಳಿಸಿತು


ಹುಟ್ಟು ಹಾಕದಿರೆ ಬಾಳದೋಣಿಯು ಸಾಗದು 

ನನ್ನ ಬಾಳದೋಣಿಯಲಿ ನೀ ಹುಟ್ಟು ಅಲ್ಲವೇನು?

ನಿನ್ನೊಲವೇ ಇಲ್ಲದಿರೆ ಈ ದೋಣಿ ದಡ ಸೇರದು

ಒಲವೇ ನಮ್ಮ ಬದುಕಾಗಿರೆ ಅಂಜಿಕೆಯು ಇನ್ನೇನು?


Rate this content
Log in

Similar kannada poem from Romance