STORYMIRROR

Prajna Raveesh

Classics Inspirational Others

4  

Prajna Raveesh

Classics Inspirational Others

ಕಾಲಚಕ್ರ

ಕಾಲಚಕ್ರ

1 min
264

ಇಂದು ಮೇಲಿದ್ದವನು ನಾಳೆ ಕೆಳಗಾಗಬಲ್ಲ

ಇಂದು ಕೆಳಗಿದ್ದವನು ನಾಳೆ ಮೇಲಾಗಬಲ್ಲ

ಇದೆಲ್ಲಾ ಉರುಳುವ ಕಾಲದ ಮಹಿಮೆಯು

ಮೇಲಿರುವ ಭಗವಂತನು ಆಡಿಸುವ ಆಟವು


 ಮೇಲು_ಕೀಳು, ಬಡವ_ಬಲ್ಲಿದ ಎಂಬುದಿಲ್ಲ

ಕಾಲಚಕ್ರದ ಎದುರಿನಲಿ ಎಲ್ಲರೂ ಸಮಾನರು

ನೀರ ಮೇಲಣ ಗುಳ್ಳೆಯಂತಿನ ಬದುಕಿನಲ್ಲಿ

ನಾಳೆ ಏನಾದೀತು ಎಂದು ಊಹಿಸಲೂ ಆಗದು


ತೃಣ ಸಮಾನರಾದ ನಾವು ಸ್ವಾರ್ಥ ಯೋಚನೆಗಳಿಂದ

ನಾನು, ನನ್ನದು, ನನ್ನಿಂದ ಎಂದು ಅಹಂಹಾರ ಪಡದೇ

ಯಾರಿಗೂ ಕೇಡು ಬಯಸದೇ, ಸ್ನೇಹ ಮನೋಭಾವದಿ

ಕೂಡಿ ಬಾಳಿದರೆ ಅದುವೇ ನಮ್ಮೀ ಜೀವನದ ಸಾರವು


ಇಲ್ಲಿ ಯಾರೂ ಶಾಶ್ವತವಲ್ಲ ಎಲ್ಲರೂ ಹೋಗಲೇಬೇಕು

ಸರ್ವಾಂತರ್ಯಾಮಿಯಾದ ಭಗವಂತನು ಇರುವ ಕಡೆಗೆ

ಮೂರು ದಿನದ ಬಾಳಿನಲ್ಲಿ ದ್ವೇಷ, ಅಸೂಯೆಗಳೇಕೆ?!

ಪ್ರಾಮಾಣಿಕ ಮಾರ್ಗದಲ್ಲಿ ನಡೆವವಗೆ ಅಂಜಿಕೆಯೇಕೆ?!


ಉರುಳುವ ಕಾಲಚಕ್ರದಿಂದ ಕಲಿಯಬೇಕು ನಾವು ಪಾಠ

 ನಾವು ಕಲಿಯದೇ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳದಿರೆ

ಅವನಾಟದಂತೆ ತಿರುಗುತ್ತಿರುವ ಕಾಲಚಕ್ರದ ಮಹಿಮೆಗೆ 

ಯಶಸ್ಸು ಕಾಣದೇ ಸೋಲಾಬೇಕಾದೀತು ಜೀವನದಲ್ಲಿ!!



Rate this content
Log in

Similar kannada poem from Classics