STORYMIRROR

Prajna Raveesh

Classics Inspirational Others

4  

Prajna Raveesh

Classics Inspirational Others

ಶಿಕ್ಷಕ

ಶಿಕ್ಷಕ

1 min
255

ಶಿಷ್ಯನ ಮನದಲ್ಲಿನ ಅಜ್ಞಾನವನ್ನು ಹೋಗಲಾಡಿಸಿ

ಜ್ಞಾನವೆಂಬ ಪ್ರಕಾಶಮಾನವಾದ ಬೆಳಕನ್ನು ತುಂಬಿ

ಕತ್ತಲೆಯ ಕೂಪದಿಂದ ಜ್ಞಾನದ ಬೆಳಕಿನ ಕಿರಣದೆಡೆಗೆ

ಸನ್ಮಾರ್ಗದ ಪ್ರಾಮಾಣಿಕ ಹಾದಿಯಲ್ಲಿ ನಡೆಸುವಾತ


ಜಾತಿ, ನೀತಿ, ಮೇಲು, ಕೀಳು ಬೇಧಭಾವ ತೋರದೇ

ಶಿಷ್ಯರನ್ನೆಲ್ಲರನ್ನೂ ಸಮಾನ ದೃಷ್ಟಿಯಿಂದ ಕಂಡು

ತನ್ನ ಸಾಮರ್ಥ್ಯಗಳಿಂದ ಶಿಷ್ಯರ ಮನಮುಟ್ಟುವಂತೆ

ಬೋಧಿಸಿ ಶಿಷ್ಯರ ಸುಂದರ ಬಾಳನು ಬೆಳಗುವಾತ 


ಶಿಷ್ಯರು ತಪ್ಪು ಹೆಜ್ಜೆಯ ಇಟ್ಟೊಡೆ ಅವರನ್ನು ಶಿಕ್ಷಿಸಿ

ಶಿಷ್ಯರಿಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟು

ತನ್ನ ಜೀವನಾನುಭವಗಳಿಂದ ಕಲಿತ ಪಾಠಗಳಿಂದ

ಶಿಷ್ಯರ ಮನಪರಿವರ್ತನೆ ಮಾಡಿ ಒಳಿತು ಕಲಿಸುವಾತ


ಕಲಿಕೆಯಲ್ಲಿ ಹಿಂದೆ ಅಥವಾ ಮುಂದೆ ಇರುವ ಶಿಷ್ಯರನ್ನು 

ಒಂದೇ ತೆರನಂತೆ ಕಂಡು ಹಿಂದುಳಿದ ವಿದ್ಯಾರ್ಥಿಗಳಿಗೆ

ನಿರಂತರ ಪ್ರೋತ್ಸಾಹ ನೀಡಿ ಅವರು ಮುಂದೆ ಬರುವಂತೆ

ಪ್ರಾಮಾಣಿಕವಾಗಿ ಪ್ರಯತ್ನಿಸುವವನೇ ನಿಜವಾದ ಶಿಕ್ಷಕ.


Rate this content
Log in

Similar kannada poem from Classics