STORYMIRROR

Prajna Raveesh

Classics Inspirational Others

4  

Prajna Raveesh

Classics Inspirational Others

ಹಣತೆಯು ಕಲಿಸುವ ಪಾಠ...

ಹಣತೆಯು ಕಲಿಸುವ ಪಾಠ...

1 min
369

ಹೃದಯವೆಂಬ ಹಣತೆಯಲ್ಲಿ

ಭಕ್ತಿಯೆಂಬ ಎಣ್ಣೆ ಎರೆದಾಗ

ಬತ್ತಿಯು ತನ್ನನ್ನೇ ಸಮರ್ಪಿಸಿ

ಸುತ್ತಲೂ ಬೆಳಕ ಪಸರಿಸುವುದು!


ಹಣತೆಯು ತನ್ನಡಿ ಕತ್ತಲೆಯಿದ್ದರೂ

 ತನ್ನ ಸುತ್ತಲೂ ಬೆಳಕನು ಪಸರಿಸಿ

ಪರೋಪಕಾರ ಗುಣವ ಮೆರೆಯುವುದು!

 ಪರೋಪಕಾರದಿ ಜಗದ ಕಣ್ತೆರಿಸುವುದು


ಎಣ್ಣೆ, ಬತ್ತಿ ಇಲ್ಲದೆ ಹಣತೆ ಎಂದೂ ಉರಿಯದು

ಬಾಳಲಿ ಒಗ್ಗಟ್ಟಿಲ್ಲದಿರೆ ಅಂಧಕಾರ ಕಳೆಯದು

ಒಬ್ಬರ ಕಷ್ಟ, ನೋವುಗಳಿಗೆ ಸಹಕರಿಸದಿರೆ

ನಮ್ಮಲ್ಲಿ ಸುಜ್ಞಾನದ ಬೆಳಕೆಂದೂ ಹರಿಯದು!


ದೀಪದಿಂದ ದೀಪವ ಬೆಳಗುತಾ ಎಲ್ಲರೊಡಗೂಡಿ

ದೀಪಗಳ ಹಬ್ಬ ದೀಪಾವಳಿಯ ಆಚರಿಸೋಣ

ಕಷ್ಟ ಕಳೆದು ಸುಖದ ಬೆಳಕು ಹರಿಯಲೆಂದು ಸ್ಮರಿಸಿ

ಹಣತೆ ಕಲಿಸುವ ಜೀವನ ಪಾಠವ ಮರೆಯದಿರೋಣ.


రచనకు రేటింగ్ ఇవ్వండి
లాగిన్

Similar kannada poem from Classics