STORYMIRROR

Prajna Raveesh

Classics Inspirational Others

4  

Prajna Raveesh

Classics Inspirational Others

ಸ್ವಾತಂತ್ರ್ಯದ ಹಬ್ಬ

ಸ್ವಾತಂತ್ರ್ಯದ ಹಬ್ಬ

1 min
258

ಇಂದು ನಮಗಿಂದು ಸ್ವಾತಂತ್ರ್ಯದ ಹಬ್ಬ

ಎಲ್ಲೆಲ್ಲೂ ಹಾರುತಿಹುದು ತಿರಂಗ ಬಾವುಟ

ದೇಶದ ಕೀರ್ತಿಯು ಪಸರಲಿ ವಿಶ್ವದ ತುಂಬಾ

ತ್ಯಾಗ,ಸಂಗ್ರಾಮವು ದೇಶಕೆ ತೊಡಿಸಿದೆ ಕಿರೀಟ


ಭಾರತ ಮಾತೆಯ ಮಡಿಲಲಿ ಜನಿಸಿದ ನಾವುಗಳು

ಸಹೋದರ ಭಾವದಿ ವಂದೇ ಮಾತರಂ ಎನ್ನುತ್ತಾ

ಜಾತಿ, ನೀತಿ, ಮೇಲು, ಕೀಳು ಎಂಬುದ ತೊರೆಯುತ್ತಾ

ಬಾಳುವ ಎಂದಿಗೂ ಒಂದೇ ತಾಯಿಯ ಮಕ್ಕಳಂತೆ


ಭಾರತದ ವಿವಿಧತೆಯಲ್ಲಿ ಏಕತೆಯನ್ನು ಸಾರುತಾ

ಶಾಂತಿ ಮಂತ್ರವ ವಿಶ್ವದೆಲ್ಲೆಡೆ ಪಠಣೆಯ ಮಾಡುತಾ

ಎಲ್ಲಾ ಧರ್ಮ, ಭಾಷೆ, ಮತಗಳನ್ನು ಗೌರವಿಸುತಾ

ಬಾಳೋಣ ಎಲ್ಲರೂ ಸಹಬಾಳ್ವೆಯಿಂದ ನಗು ನಗುತಾ


ಇಂದು ನಮ್ಮ ತಾಯ್ನಾಡಿನ ಕಂಪು ಎಲ್ಲೆಡೆ ಸೂಸಲು

ಮನಕೇನೋ ಸವಿ ಖುಷಿಯ ಸಂಭ್ರಮದ ಇಂಪು

ನಮ್ಮ ರಾಷ್ಟ್ರಧ್ವಜವು ಆಕಾಶದೆತ್ತರಕ್ಕೆ ಹಾರಲು

ಎರೆದರು ದೇಶಪ್ರೇಮಿಗಳು ಅಂದು ತಮ್ಮ ನೆತ್ತರನ್ನೇ


ಮರೆಯಲಾದೀತೇ ಅವರ ತ್ಯಾಗ, ಬಲಿದಾನಗಳ?!

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಿಟ್ಟ ರತ್ನಗಳ?!

ತಮ್ಮ ಇಡೀ ಜೀವನವನ್ನೇ ದೇಶ ಸೇವೆಗಾಗಿ ಅರ್ಪಿಸಿ

 ಈ ದಿನವ ಕೊಡುಗೆ ಕೊಟ್ಟರು ತಮ್ಮನ್ನೇ ಸಮರ್ಪಿಸಿ!



Rate this content
Log in

Similar kannada poem from Classics