Jyoti desai jyoti devanagaav

Classics

2  

Jyoti desai jyoti devanagaav

Classics

ಅವ್ವ

ಅವ್ವ

1 min
539


ಅವ್ವ ಅದು ಹೇಗೆ ತಡೆದುಕೊಳ್ಳುತ್ತೀ 

ಹೊಗೆ ದಹಿಸುತ್ತಿದೆ ಕಣ್ಣುಒತ್ತಿ

ಬೆಯುತ್ತಿರುವುದು ಅನ್ನವೋ

ನನ್ನವ್ವನ ದೇಹವೋ ಅರಿಯದೆ ನಾ ಮೌನಿ


ಹಸಿಯಾದ ಕಟ್ಟಿಗೆ ಉರುವಲು 

ಬರಿ ಹೊಗೆ

 ಕರಕಲಾಗುತ್ತಿರುವ ಬೆರಣಿ

ಒಣ ಬೂದಿ ಹಾರುತ್ತಿದೆ ಮೇಲೆ ಮೇಲೆ

ಅನ್ನ ಕುದಿಯುತ್ತಿರುವ ಸದ್ದೇ ಕೇಳುತ್ತಿಲ್ಲ ಒಳಗೆ


ಚಿಕ್ಕದಾದ ಕೋಣೆಯನ್ನೆಲ್ಲಾ

ಮೂಲೆ,ಮೂಲೆಯು ಮುಚ್ಚಿಹಾಕಿದೆಹೊಗೆ

ಕ್ಷಣ ಕೂರಲು ಚಡಪಡಿಸುತ್ತಿರುವೆ ನಾ

 ಹೇಗೆ ಕಳೆಯುವೆ ಈ ನರಕದಲ್ಲಿ 


ನೀ ಮಾಡಿದರೇನು ತಿಳಿಸಾರು ಅನ್ನ ರೊಟ್ಟಿ

ಪಂಚ ಪರಮಾನ್ನವದು ಕಾಯುತ್ತಿದೆ ಹೊಟ್ಟೆ 

ನಿನ್ನ ಕೈ ರುಚಿ ಬೇರೆಲ್ಲೂ ಸಿಗವಂತದಲ್ಲ

ಯಾರ ಹೋಲಿಕೆಗೂ ನೀ ಸಿಗುವವಳಲ್ಲ


ಯಾರಾದರೂ ನೋಡಲಿ ಎಂಬ ಹಂಬಲವಿಲ್ಲ ಹೊಗಳಲೆಂಬ ಆಸೆ ಆಕಾಂಕ್ಷೆ ಗಳಿಲ್ಲ

ಹೆತ್ತ ಕುಡಿಗಳ ತುತ್ತಿನ ಚೀಲ ತುಂಬಲು ಪಡಿಪಾಟಲು 

ಸಹಜವೆಂಬಂತೆ 

ಒಗ್ಗಿಹಳು ಬಹುಪಾಲು


ಒಲೆಯ ಬೆಂಕಿಯೊಂದಿಗೆ ದಹಿಸುತ್ತಿದೆ ಒಡಲು 

ಹೊತ್ತೊತ್ತಿಗೆ ಸರಿಯಾಗಿ ಮಾಡಿ ಮುಗಿಸಬೇಕಾದ ಕೆಲಸಗಳ ನೆನೆದು 

ಹೊರಡಬೇಕಿದೆ ಬುತ್ತಿ ಗಂಟಿಡಿದು ಹೊಲಗದ್ದೆ ಕೆಲಸಕ್ಕೆ

ಬರಿಗಾಲಲ್ಲಿ ನಡೆದು


ತಡವಾದರೆ ಬೈಯುವ ಹೊಲದ ಯಜಮಾನ

ಬೈಗುಳದ ಸುರಿಮಳೆಯೊಡನೆ ಮಾಡುವನು  

ನಮ್ಮವರ ಮುಂದೆಯೇ ಅವಮಾನ

ಮಾನಕ್ಕಂಜುವ ಬಡವಿ ಅವ್ವಳದು ಮೂಕರೋದನ


ಮಸಿ ಮೆತ್ತಿಸಿಕೊಂಡು ತನ್ನ ಕೈಗೆ ಮೈಗೆ

ಹಸನಾದ ಬೆಳಕನೀಯುತ್ತಿರುವಳು ನಮ್ಮ ಬಾಳ್ಗೆ

ಬೇಸರ ಮಾಡಿಕೊಂಡವಳಲ್ಲ ತನ್ನ ಕಾಯಕದ ಮೇಲೆ

ಅವ್ವಳಂತೆ ಇನ್ನೊಬ್ಬರಿಲ್ಲ ಈ ಭೂಮಿ ಮೇಲೆ


ಹಗಲು ಕೆಲಸದ ದಣಿವು ರಾತ್ರಿ ಮತ್ತೆ ಹಾಜರ್

ಉರಿಯದ ಒಲೆಯ ಮುಂದೆ  

ಯಜ್ಞ ಕುಂಡದಲ್ಲಿ ಬೇಯುವ ನಿತ್ಯ ಕಾಯಕ ನಿರಂತರ

ಊದುಕೊಳವೆಗೂ ದಣಿವಾಗಿರಬಹುದು ನಿನಗೆ?


Rate this content
Log in

More kannada poem from Jyoti desai jyoti devanagaav

Similar kannada poem from Classics