STORYMIRROR

Jyoti desai jyoti devanagaav

Tragedy

2  

Jyoti desai jyoti devanagaav

Tragedy

ಬೇರು

ಬೇರು

1 min
132

ಒಂದಿತ್ತು ತಾಯಿ ಬೇರು

ನನ್ನ ಮನೆಯಲಿ

ಹತ್ತು ಮಕ್ಕಳ ರೆಂಬೆ ಕೊಂಬೆ

ಅದರ ಒಡಲಲಿ


ನಾಲ್ಕು ಹೂವು ಆರು ಹಣ್ಣು

ಹತ್ತಾರು ಚಿಗುರು ಸೊಬಗಲಿ

ಒಂದುಗೂಡಿ ಒಲುಮೆಯಿಂದ

ಬಾಳುತಿದ್ದವು ಬನದಲಿ


ತುಂಬಿದ ವನ ಒಡೆದೆ ಹೋಯ್ತು

ದಾಯಾದಿ ಕಲಹದಲಿ

ಜೀವವೊಂದು ಆರಿಹೊಯ್ತು

ಹಪ ಹಪಿ ಸಂಕಟದಲಿ


ದಿಕ್ಕಾಪಾಲು ಚದುರಿಹೊಯ್ತು

ಮಂದೆಲ್ಲ ಬಳಗವು

ಪ್ರೀತಿ ಇಲ್ಲ ಪ್ರೇಮವಿಲ್ಲ

ಬಂಧಗಳ ಎಳೆಯಲಿ


ಒಪ್ಪುತ್ತಿಲ್ಲ ಅಪ್ಪುತಿಲ್ಲ

ತನ್ನವರ ತಪ್ಪು ಮನ್ನಿಸಿ

ಬೆಪ್ಪನಾಗಿ ನೋಡುತ್ತಿರುವೆ 

ತಪ್ಪಿದ ದಾರಿಯ ಸಂಧಿಸಿ


ತಾಯಿಮರ ಉರುಳೇ ಹೋಯ್ತು

ನೆನಪ ನರಳಾಟದಲಿ

ಮನವು ನೆನೆದು ಬಿಕ್ಕುತಿದೆ

 ಅದರ ಬುಡದಲಿ



Rate this content
Log in

More kannada poem from Jyoti desai jyoti devanagaav

Similar kannada poem from Tragedy