ಅಂತರಾಳದ ಕೂಗು
ಅಂತರಾಳದ ಕೂಗು




ತನ್ನೂರ ಮರೆತು ವಿದೇಶವೆಂದು ಮೆರೆದಾಡಿದವರಿಗೆ ತಾಯ್ನಡನ್ನು ನೆನಪಿಸಿದಕ್ಕಾಗಿ ವಂದಿಸಲೇ
ಹಿಂದೂ ಕ್ರಿಸ್ತ ಮುಸ್ಲಿಂ ಎಂಬ ಭೇದಭಾವ ತೊರದೆ
ಜನರ ಬಲಿ ಪಡೆಯುವ ನಿನಗೆ ಶಾಪ ಹಾಕಲೆ
ಒಂದು ಹೊತ್ತಿನ ಊಟಕ್ಕಾಗಿ ದಿನಗೂಲಿ ಮಾಡುತ್ತಿದ್ದವರ ಬದುಕು ಕಸಿದ ನಿನ್ನನ್ನು ಕೊಚ್ಚಿ ಹಾಕಲೇ
ಹೊಟ್ಟೆ ಪಾಡಿಗೆ ತನ್ನವರಿಂದ ದೂರವಿದ್ದವರನ್ನು ಒಂದೇ ಗೂಡಿನೊಳಗೆ ಕಟ್ಟಿಹಾಕಿದಕ್ಕೆ ಖುಷಿಪಡಲೇ
ಕ್ಷಣ ಕ್ಷಣವು ಭಯದಲ್ಲಿ ಬದುಕುವಂತೆ ಮಾಡಿದ ನಿನ್ನನ್ನು ಕೊಂದು ಬಿಡಲೇ
ಮಾಲಿನ್ಯಗಳಿಲ್ಲದ ಸ್ವಚ್ಛಂದ ಪರಿಸರದಲ್ಲಿ ಉಸಿರಾಡಲು ಅವಕಾಶ ನೀಡಿದ ನಿನ್ನನ್ನು ಮುದ್ದಾಡಲೇ
ಹಣದುಬ್ಬರ ಕುಸಿದು ದೇಶದ ಆರ್ಥಿಕತೆಯನ್ನು ಪಾತಾಳಕಿಳಿಸಿದ ನಿನ್ನನ್ನು ದ್ವೇಷ ಮಾಡಲೇ
ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ
ಜೀವಭಯದಿ ಮನೆಯಿಂದ ಹೊರಹೊಗದಂತೆ ಮಾಡಿದ ನಿನ್ನನ್ನು ಚಚ್ಚಿ ಹಾಕಲೇ
ದೇಶಸೇವೆಯೇ ಈಶ ಸೇವೆಯೆಂದು ದುಡಿಯುವ
ಆರಕ್ಷಕರ ಕಾರ್ಯವೈಖರಿಗೆ ಸಂತೋಷಪಡಲೇ
ಜೀವ ಭಯದಿ ಸತ್ತವರ ಸಂಸ್ಕಾರಕ್ಕೂ ಹೋಗಲಾರದ ದೀನತೆ ತಂದದಕ್ಕೆ ಮರುಗಲೇ
ಪ್ರಾಣದ ಹಂಗನ್ನು ಲೆಕ್ಕಿಸದೇ ರೋಗಿಗಳ ಸೇವೆ ಮಾಡುವ ವೈದ್ಯರನ್ನು ಶ್ಲಾಘಿಸಲೇ
ರಟ್ಟೆಯಲ್ಲಿ ಶಕ್ತಿಯಿದ್ದರೂ ದುಡಿಯದ ಸ್ಥಿತಿ ತಂದ ನಿನ್ನನ್ನು
ಸಿಗಿದು ಹಾಕಲೇ
ಜನರ ಹಸಿವು ನಿಗಿಸಲು ರೈತ ಪಡುವ ಪಾಡನ್ನು ಜನತೆಗೆ
ತಿಳಿಯುವಂತೆ ಮಾಡಿದ ನಿನಗೆ ಧನ್ಯವಾದ ಹೇಳಲೇ
ಮೇಲು ಕೀಳು ಶ್ರೀಮಂತ ಬಡವನೆಂಬುಂದು ಮರೆತು ದೀನರ ಮೊರೆಯನ್ನು ಆಲಿಸು
ಹೇ ಕರೋನಾ; ಜಗತ್ತನ್ನು ನಿನ್ನ ಕರಿಛಾಯೆಯಿಂದ ಬಂಧ ಮುಕ್ತಿಗೊಳಿಸು