ಗೋ ಮಾತೆ
ಗೋ ಮಾತೆ
ನಿನ್ನ ಎರಡು ಮುಗ್ಧ ಕಂಗಳಲಿ
ಅದೆಷ್ಟು ಪ್ರೀತಿ, ವಾತ್ಸಲ್ಯ ತುಂಬಿದೆ
ನಿನ್ನ ಒಂದು ಕರುಣೆಯ ನೋಟದಲಿ
ನೂರಾರು ಭಾವಗಳು ತುಂಬಿ ತುಳುಕಿದೆ
ಜಗದ ಮಾತೆ ನೀನು ಅಂಬಾ ಎನ್ನುವೆ
ತ್ಯಾಜ್ಯ ಉಂಡರೂ ಅಮೃತವನ್ನೇ ನೀಡುವೆ
ಹುಟ್ಟಿನಿಂದ ಸಾವಿನವರೆಗೂ ಬಂಧುವಾಗುವೆ
ಜೀವನದುದ್ದಕ್ಕೂ ಉಪಕಾರವನ್ನೇ ಮಾಡುವೆ
ಮುಕ್ಕೋಟಿ ದೇವತೆಗಳು ನಿನ್ನೊಳಗೆ ನೆಲೆಸಿವೆ
ಗೋ ಮಾತೆಯಾಗಿ ಮನು ಕುಲವ ರಕ್ಷಿಸುವೆ
ನಿನ್ನ ಮೂತ್ರ, ಗೋಮಯವೂ ಪೂಜ್ಯನೀಯ
ಸೇವಿಸಿದರೆ ಸರ್ವ ರೋಗಗಳೂ ಶಮನೀಯ
ಬೇಡಿದ್ದನ್ನು ಕರುಣಿಸುವ ಕಾಮಧೇನು ನೀನು
ನಿನ್ನ ನೆರಳಿನಲ್ಲಿ ಬೆಳೆದ ಪುಟ್ಟ ಕಂದನು ನಾನು
ಗೋವೆಂದರೆ ಕೃಷ್ಣ ಪರಮಾತ್ಮನಿಗೆ ಅತಿ ಪ್ರೀತಿ
ಗೋವಿರುವ ಮನೆಯಲ್ಲಿಲ್ಲ ಯಾವುದೇ ಭೀತಿ
ಮನೆ ಶುದ್ಧಿ ಮಾಡಲು ನಿನ್ನ ಪಂಚಗವ್ಯವು ಬೇಕು
ರೋಗಾಣುಗಳ ನಾಶ ಮಾಡಲು ಗೋಮಯ ಬೇಕು
ಆಪತ್ಕಾಲದಲ್ಲಿ ಬಂಧುವಾಗಿ ನಿನ್ನ ಸಂಗಡವು ಬೇಕು
ಜಗದೋದ್ಧಾರಿಣಿ ಜನನಿ ನಿನ್ನ ಆಶೀರ್ವಾದವು ಬೇಕು
ಗೋವುಗಳಿರುವ ಮನೆಯೇ ಶ್ರೀಕೃಷ್ಣನ ನೆಲೆ
ಗೋವೆಂದರೆ ಸುಖ, ಶಾಂತಿ, ಸಮೃದ್ಧಿಯ ಸೆಲೆ
ಕಟ್ಟಲಾಗದು ಗೋ ಮಾತೆಯ ತ್ಯಾಗಕ್ಕೆ ಬೆಲೆ
ಕಟುಕರು ಮಾಡುತಿಹರಲ್ಲಾ ಮಾತೆಯ ಕೊಲೆ!
ಮಾತೆಯ ಹಾಲು, ತುಪ್ಪ, ಮೊಸರಿನಿಂದ ಉಂಡು
ನಿನ್ನ ಸ್ವಾರ್ಥಕ್ಕಾಗಿ ಮುಗ್ಧ ತಾಯಿಗೆ ಬಗೆದರೆ ಕೇಡು
ಕಟುಕನೇ ನಿನ್ನ ಅಂತ್ಯ ಹೇಗಾದೀತೆಂದೊಮ್ಮೆ ಊಹಿಸು
ಪರಿಶುದ್ಧ ಮನದಿ ಮಾತೆಯನ್ನೊಮ್ಮೆ ಪೂಜಿಸಿ ರಕ್ಷಿಸು!!
