STORYMIRROR

SIDDU GP

Tragedy Inspirational

4  

SIDDU GP

Tragedy Inspirational

ಕರಾಳ ರಾತ್ರಿ

ಕರಾಳ ರಾತ್ರಿ

1 min
61


ಹಕ್ಕಿಗಳ ಹಾರಾಟದಲ್ಲೊಂದು ತಾಳವಿತು

ತಂಗಾಳಿಯಲ್ಲೊಂದು ರಾಗವಿತು

ಹರಿಯುತ್ತಿದ ನದಿಯಲ್ಲೊಂದು ಕುಣಿತವಿತು

ಆಗಸದಲ್ಲಿ ಮಿಂಚುತ್ತಿದ ನಕ್ಷತ್ರಗಳಲ್ಲಿ ಅಂದವಿತು

ಅಂದ ಚೆಂದದ ಆಗಸವು ಕರಾಳದ ಕರಬಂಧಗಳಲ್ಲಿ ಬಂಧಿಯಾಯಿತು ||


ಆ ಕರಾಳರಾತ್ರಿಯಲ್ಲಿ ಹಕ್ಕಿಯೊಂದು ಹಾರಾಡುತ್ತಿತು

ಅದರ ರೆಕ್ಕೆಗಳಲ್ಲಿ ಬಲವಿರಲಿಲ್ಲ ಆದರೂ

ಅದು ಆಗಸದ ಕರಾಳತೆಯನ್ನು ಮೀರಿ ಹಾರುವ ಆತುರದಲ್ಲಿತ್ತು

ಆದರೂ ಆ ಕರಾಳತೆ ಅದರ ಭರವಸೆ ನುಂಗಿತ್ತು

ನದಿ ತನ್ನ ದಂಡವನ್ನೇ ನುಂಗುವ ಹಾಗೆ ||


ನಕ್ಷತ್ರಗಳು ತಮ್ಮ ಮಿಂಚು ಕಳೆದುಕೊಂಡು

ತನ್ನ ತಾಯಿ ಮಡಿಲ ಸೇರುವಂತೆ ಬೇಡುತ್ತಿದವು

ುಡುಗು ಜೋರಾಗಿ ಅಪ್ಪಳಿಸಿತ್ತು

ಜಗದ ಸಹನೆಯ ದಡ ಕೊಚ್ಚಿಹೋಗುವಂತೆ

ಕರಾಳತೆ ಜಗವನ್ನೇ ಬಂಧಿಸುವ ಹಾಗಿತ್ತು ||


ಅಂಧಕಾರದ ಅಟ್ಟಹಾಸದಲ್ಲಿ ಜಗ ಮುಳುಗುತ್ತಿರಲು

ಬುದ್ದಿಯ ಬೆಳಕೊಂದು ಮಿಂಚಿನಂತೆ ಹಬ್ಬಿ ಬಂತು

ಬೆಳಕನ್ನ ನುಂಗುತ್ತಿದ ಕರಾಳತೆಯನ್ನ ಕೊಲ್ಲುವಂತೆ

ಭರವಸೆಯನ್ನ ಆವರಿಸಿದ ಕರಿಛಾಯೆಯನ್ನು ನುಂಗಲು

ದೀಪ ತನ್ನ ಸುಟ್ಟುಕೊಂಡು ಬೆಳಕು ಹಬ್ಬಿಸುವಂತೆ ||


ಕರಾಳತೆಯ ಕೈಯಲ್ಲಿ ನಂಬಿಕೆ ಸೋಲದೆ

ಪ್ರೀತಿಯ ಭರವಸೆಯೊಂದು ಹಬ್ಬುತ್ತಾ

ಹರಡಿದ ಕರಿಛಾಯೆಯು ಕಳೆಯಲು

ಹೊಸ ಬೆಳಕೊಂದು ಜಗವನ್ನ ಬೆಳಗಿತ್ತು

ಎಲ್ಲವನ್ನು ತೊರೆದು ಎಲ್ಲವನ್ನು ಪಡೆದಂತೆ ||


Rate this content
Log in

Similar kannada poem from Tragedy