ಗಜಲ್
ಗಜಲ್
ನನ್ನ ತೊರೆದಂದು ಹೊತ್ತಿದ ಬೆಂಕಿ
ಎದೆ ವನವ ಆಪೋಷಿಸುತ್ತಿದೆ ಸಾಕಿ
ನೆಟ್ಟ ಪ್ರೇಮಲತೆ ಹೊಸ ಹೂವೊಂದು ಹೆತ್ತಿತ್ತು
ಅದೀಗ ಕೊನೆಉಸಿರು ಚೆಲ್ಲಿ ನಿಸ್ತೇಜವಾಗಿದೆ ಸಾಕಿ
ಪ್ರಾಣ ಎಂದು ಹೆಸರಿಟ್ಟಳು,
ಹೆಸರನ್ನು ಆಗಾಗ ಬದಲಿಸಬಹುದೇ ಸಾಕಿ?
ಪ್ರೀತಿಗೆ ಸಾಕ್ಷಿ ಹುಡುಕಲಾರೆ,
ಅಂತರಂಗದ ಸ್ಫಟಿಕ ಶುದ್ಧತೆಯನ್ನು ವಿಚಾರಣೆಗೆ ನಿಲ್ಲಿಸಿದವರ ಮುಂದೆ
ನ್ಯಾಯವಾದಿಯ ಸವಾಲುಗಳ ಶರ
ಬದುಕಿನ ಖಾಸಗಿತನಕ್ಕೆ ಗುರಿ ಇಟ್ಟಿದೆ ಸಾಕಿ
ಸಂಘರ್ಷ ಯಾರೊಂದಿಗೆ? ನನ್ನೊಡನೆ ಯೋ?
ದೇವರೆಂಬ ಪ್ರೆಮದೊಂದಿಗೆಯೋ ತಿಳಿಯದಾಗ
ಿದೆ ಸಾಕಿ
ವಿರಸದ ಕಾಳ್ಗಿಚ್ಚು ಪ್ರೇಮಿಗಳನ್ನು ದಹಿಸಬಹುದು ಸಾಕಿ
ಪ್ರೇಮವೆಂಬ ದಿವ್ಯ ಮಂತ್ರದ ಹೊರತು
ಒಲುಮೆ ಸಿದ್ದಿಗೆ ಬೇರೆ ಬಿಜಾಕ್ಷರಗಳಿಲ್ಲ ಸಾಕಿ
ಬದುಕು ದೂಷಿಸುತ್ತಲೆ ನಡೆವಷ್ಟು ದೀರ್ಘವಲ್ಲ
ಅಂತ್ಯ ಹೊಂಚುತ್ತಲೆ ತಿರುಗುತ್ತಿದೆ ಸಾಕಿ
ಕಾಲ ಕರೆವಾಗ ಬದುಕು ಅಂಗಲಾಚಿದರೆ
ಕನಿಕರ ಅವನಿಗೆ ತಿಳಿಯದಾ ಶಬ್ದವದು ಸಾಕಿ
ಅಂತರಂಗದ ಸಖಿ ನನಗವಳು ಆತ್ಮದಲ್ಲಿ ಭೇದವೆಣಿಸಿ ಉಳಿದವರುಂಟೆ ಸಾಕಿ?
ಕತ್ತಲಿಗೆ ಸರಿದರೂ ಸರಿಯೇ
ಅವಳ ದಾರಿಗೆ ಕಿರು "ಜ್ಯೋತಿ"ಯೊಂದ ಹೊತ್ತಿಸಿಡುವೆ ಸಾಕಿ