STORYMIRROR

Prabhakar Tamragouri

Tragedy Inspirational Others

4.5  

Prabhakar Tamragouri

Tragedy Inspirational Others

ಒಂದು ವೃತ್ತದ ಸುತ್ತ

ಒಂದು ವೃತ್ತದ ಸುತ್ತ

1 min
357



ಒಂದು ವೃತ್ತದ ಸುತ್ತ

ಆ ವ್ಯಕ್ತಿ ಹೀಗೇಕೆ ಬಿದ್ದಿದ್ದಾನ

ಸುಭಾಸ್ ಚೌಕದ ವೃತ್ತದ ಪಕ್ಕ 

ಜಗತ್ತನ್ನೇ ಮರೆತವನಂತೆ ?


ಸರ್ಕಲ್ ನ ಸುತ್ತ ಓಡಾಡುತ್ತಿವೆ 

ನೂರಾರು ವಾಹನಗಳು ಹಲ್ಲಿಗಳಂತೆ

ತುಂಬಿದ ಬಸ್ಸುಗಳು ,

ಕಿಲಕಿಲ ನಗುವ ಸುಂದರಿಯರು ,

ಕಬ್ಬಿಣದ ತಂತಿಮೇಲೆ ಕೂತ ಕಾಗೆಗಳು, 

ಹೂವು ಮಾರುತ್ತಾ ಕೂತ ರಾಜಾಸ್ತಾನಿಗಳು ,

ಕಾರಿನ ಗ್ಲಾಸ್ ಏರಿಸಿ ಕುಳಿತ 

ಶ್ರೀಮಂತ ಯುವಕರು .

ಬೆತ್ತಲೆ ಓಡಾಡುವ ಮಕ್ಕಳು 

ತಡಕಾಡುತ್ತಾ ನಿಂತ ಕುರುಡ 

rong>

ಯಾರ ಗೊಡವೆಯೂ ಇಲ್ಲದಂತೆ 

ಹೀಗೆ ಸುಮ್ಮನೆ ಬಿದ್ದಿದ್ದಾನೆ ಆ ವ್ಯಕ್ತಿ !


ಸಣ್ಣಗೆ ಹನಿಸುವ ಮಳೆ, 

ಮೆಲ್ಲಗೆ ಹರಿವ ಕೊಚ್ಛೆ ಗಟಾರ, 

ಬೆನ್ನಿಗೆ ಕೂಸು ಕಟ್ಟಿಕೊಂಡು 

ಓಡಾಡುವ ವಿದೇಶಿಯರು 

ಎಲ್ಲರೂ ವ್ಯವಸ್ಥಿತವೆಂಬಂತೆ 

ನಡೆಯುತ್ತಲೇ ಇವೆ 

ಆದರೂ , 

ಆ ವ್ಯಕ್ತಿ ಹಾಗೇ ಬಿದ್ದಿದ್ದಾನೆ 

ಯಾವ ಪರಿವೆಯೂ ಇಲ್ಲದಂತೆ 

ಜಗತ್ತನ್ನೇ ಮರೆತಂತೆ 

ತನ್ನ ಸುತ್ತಲಿನ ಸಮಾಜವನ್ನೇ 

ತೊರೆದವನಂತೆ !



Rate this content
Log in

Similar kannada poem from Tragedy