ಬದುಕು ಬಯಲಾಯ್ತು
ಬದುಕು ಬಯಲಾಯ್ತು
ಬದುಕು ಬಯಲಾಯ್ತು
ಬಯಲಾಯ್ತು ಬದುಕು
ವಾಂಛೆಗಳೊಡನೆ ಸೇರಿ
ಕನಸುಗಳ ಸ್ನೇಹ ಮಾಡಿ
ಬದುಕು ಬದಲಾಯ್ತು
ಬಣ್ಣನೆಗೆ ಸಿಗದಂತೆ
ಭವಿಷ್ಯತ್ತಿನ ಅಂದಾಜಿರದೆ
ವರ್ತಮಾನದ ಹಂಗಿರದೆ
ಭೂತದ ಗುಂಗಿರದೆ
ವಜಾ ಮಾಡುತ ಕಹಿ ನೆನಪುಗಳ
ಬದುಕು ಬಯಲಾಯ್ತು
ವಂದಿಸುತ ನಿಂದಕರಿಗೆ
ಸಂದಿಸುತ ನಿರ್ಜರರ
ವಂಚಕರ ಲೆಕ್ಕಿಸದೆ
ಸಟೆಯಲ್ಲಿ ನೃತವ ಅರಸುತ
g>ವರ್ಜಿಸುತ ನೆರವೇರದ ಸ್ವಪ್ನಗಳ ಬದುಕು ಬದಲಾಯ್ತು ಬೇತಾಳದಂತೆ ಕುಣಿವಾಗ ಬಣ್ಣದ ಮುಖವಾಡ ಕಳಚಿ ಬೊಗಳೆ ಮಾತು ಲೊಟ್ಟೆಯಾಗಿ ಬೆಸ್ತು ಬಿದ್ದ ತರುವಾಯ ಬೆಳ್ಳಗಿರುವುದೆಲ್ಲ ಹಾಲಲ್ಲವೆಂದು ಬದುಕು ಬದಲಾಯ್ತು ಬದುಕು ಬದಲಾಗಿ ಬಯಲೆ ಬದುಕಾಗಿ ಬದಲಾದ ಬದುಕು ಕೇಳಿತು ನನ್ನಲೊಂದು ಒಲವು ಅಂಕುರಿಸಲಿಲ್ಲವೇಕೆ…?? ಬಯಲಾದ ಬದುಕು ಹೇಳಿತು ಚಿಗುರಲು ನನ್ನೆದೆ ಬರಡಾಗಿದೆ.