STORYMIRROR

Ranjitha M

Tragedy Classics Inspirational

4  

Ranjitha M

Tragedy Classics Inspirational

ಮಳೆಯೊಂದಿಗಿನ ಸಂವಾದ!

ಮಳೆಯೊಂದಿಗಿನ ಸಂವಾದ!

1 min
334

ಮಳೆಯೇ ನಿನ್ನ ಕೂಗು ನನಗೆ ಕೇಳುತಿದೆ

ನಿನ್ನೆದೆಯೊಳಗೆ ಅವಿತಿರುವ ನೋವಿನ ಕಾರ್ಮೋಡಗಳು

ನಿನ್ನೊಳಗೆ ಆವಿರ್ಭವಿಸಿರುವ ವ್ಯಥೆಯ ಕಾರಣ

ನನಗೂ ತಿಳಿದಿದೆ ನಿನಗೆ ಇದು ಗೊತ್ತೇ...????


ಮೋಡದ ಮರೆಯೊಳಗೆ ನೀನವಿತು ಕುಳಿತಾಗ

ಕಪ್ಪಾಗಿಯೇ ಕಾಣುವೆ ಅದು ನಿನಗೆ ಗೊತ್ತೇ...??

ಗಾಢವಾದ ನಿದಿರೆಯಲ್ಲಿರುವಾಗ ಎಚ್ಚರವಾಗಿ

ಬೆಚ್ಚಿಬೀಳುವಂತೆ ಒಮ್ಮೆಲೆ ಧರೆಗೆ ಹಾರಿ ಬಿಡುವೆ ಅದೇಕೆ??


ನೀ ಭುವಿಯ ಮೈಯನು ತಾಕಿದ ಕ್ಷಣವೇ

ಮಣ್ಣ ಬಣ್ಣ ಬದಲಾಗಿ ಸುಗಂಧ ಪಸರಿಸುವುದು

ಅಳಲು ಮನುಜನಿಗಿಹ ಚಿಂತೆಗಳು ನಿನಗೂ ಇವೆಯೇ??

ಮಳಲ ಮೇಲೆ ಚಿತ್ತಾರ ಬರೆಯುವೆ ನೀನು ಅದೇಕೆ??


ನಾ ನಗುವುದು , ಗಹಗಹಿಸಿ ನಗುವುದು ಹೆಣ್ಣೇ!!

ಅದು ಕಣ್ಣೀರಲ್ಲ , ಅಪಾರ್ಥ ಮಾಡಿಕೊಳ್ಳಬೇಡ

ಎಂದು ನೀನು ಹೇಳಿಬಿಟ್ಟರೆ ನಾ ನಂಬಲಾರೆ..!!

ನೀ ಮಳೆಯಾದರೇನಂತೆ ನಿನಗೆ ನೋವಿಲ್ಲವೇ?


ನಿನಗೆ ತಿಳಿದಿದೆ ಕೆಲವು ಕಹಿಯಾದ ಸತ್ಯಗಳು 

ಆದರೂ ನೀನು ನಿನ್ನ ಕರ್ತವ್ಯವ ಮಾಡುವೆ

ಕಾಯಕವೇ ಕೈಲಾಸ ಎನ್ನುತಲಿ ಬರುವೆ

ನಿನ್ನ ಮನದೊಳಗು ದುಃಖ ದುಮ್ಮಾನಗಳಿಲ್ಲವೇ?


ಹೇ ಮಳೆಯೇ...!! ನಿನ್ನ ಆರ್ತನಾದ ಎನಗೆ ಕೇಳುತಿದೆ

ನಿನ್ನೊಳಗು ಹೇಳಿಕೊಳ್ಳಲಾಗದ ವಿರಹ ಗೀತೆಗಳಿವೆ

ಬೇಸರದ ಹಳೆಯ ಕಥೆಗಳಿವೆ, ಒಂದಷ್ಟು ತಳಮಳಗಳಿವೆ

ನೇಸರನ ಕಾಣದ ಬೇಗುದಿಯ ನೆನಪು ನಿನ್ನನ್ನು ಕಾಡಿವೆ..??


ಮಳೆಯೆ ಒಮ್ಮೆ ಹೇಳಿಬಿಡು ನನಗೂ ಭಾವನೆ ಇದೆಯೆಂದು

ನೀ ಬಿಕ್ಕಳಿಸುವಾಗ ನನ್ನ ಕಿವಿಗಳು ಚುರುಕಾಗಿರುತ್ತವೆ

ಹಾಳೆಯ ಮೇಲೆ ಬರೆದಂತೆ ಸರಾಗವಾಗಿ ಚಿತ್ತಿಲ್ಲದೆ 

ನೀ ಬರುವೆ ಎಂದಿನಂತೆ ಕಾಯಕ ಯೋಗಿಯಂತೆ .



Rate this content
Log in

Similar kannada poem from Tragedy