ಅಪ್ಪಾಜಿ
ಅಪ್ಪಾಜಿ
ಅಪ್ಪಾಜಿ ಎಂದು ಯಾರನು ಕೂಗಲಿ ನಾ
ನಿನ್ನ ನೆನಪಲೇ ಸದಾ ಕೊರಗುವೆ ನಾ
ಕಲಿಸದೇ ಎಲ್ಲವನ್ನೂ ಕಲಿತೆ ನಾ
ನಿನ್ನ ನೋಡುತ್ತಾ ಬೆಳೆದೆ ನಾ
ನೀನೊಂದು ತುತ್ತು ತಿಂದು, ಎಲ್ಲರ ಖುಷಿಯಲ್ಲಿ ಮಿಂದು!!
ನಿನ್ನ ಕುಟುಂಬವೇ ಸರ್ವಸ್ವ ಎಂದು ನಂಬಿದ್ದು
ನಿನ್ನ ಜೀವನವ ಗಂಧದ ಕೊರಡಿನ ಹಾಗೆ ತೇಯ್ದು
ನಿನ್ನ ಬಾಳಿನ ಜೋಳಿಗೆಯ ಮಾಡಿಕೊಂಡೆಯ ಅಪ್ಪ ಬರಿದು!!!
ಆ ಮುಗುಳ್ನಗೆಯ ಹಿಂದೆ ನೋವನೂ ಕಂಡೆ ನಾ
ಆದರೆ ಕಾರಣವ ತಿಳಿದೂ ಹೇಳದೆ ಹೋದೆ ನಾ ...
ಕೇಳುವುದೇ ತಡ, ಬೇಡವೆನ್ನುವಷ್ಟು ಕೊಟ್ಟ ನಿನಗೆ
ನಾ ಕೊಡಲಾರೆದೆ ಹೋದೆ ಏನನ್ನೂ ಕೊನೆಗೆ!!!
ಸ್ಕೂಟರನು ಬಂಡಿಯ ಹಾಗೆ ಓಡಿಸುವ ನಿನ್ನ ಪರಿ
ಸ್ಕೂಟರಿನ ಮೇಲೆ ನಿನ್ನ ಕಡೆಯ ಪಯಣ, ಇದಲ್ಲ ಸರಿ!!
ಕೇಳು ಭಗವಂತನೇ, ಕೊಡು ನನ್ನ ಅಪ್ಪಾಜಿಯ ಆತ್ಮಕ್ಕೆ ಶಾಂತಿ
ಇದೇ ಈ ಬಡ ಕೂಸಿನ ವಿನಮ್ರ ವಿನಂತಿ !!!
ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ
ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ್ನ ನಾ...
