STORYMIRROR

ಹೃದಯ ಸ್ಪರ್ಶಿ

Tragedy Classics Others

4  

ಹೃದಯ ಸ್ಪರ್ಶಿ

Tragedy Classics Others

ಮಾನವೀಯತೆ

ಮಾನವೀಯತೆ

1 min
322

ಸತ್ಯಕ್ಕೂ ಸೋಲಾಗಿರಬಹುದು 

ಸತ್ಯದ ದಾರಿ ತೊರೆಯಲಾದೀತೆ..?

ಅನ್ಯಾಯ ನಡೆಯುತ್ತಿರಬಹುದು

ನ್ಯಾಯವೇ ಇಲ್ಲ ಎನ್ನಲಾದೀತೆ.?


ವಯಸ್ಸು ಎಷ್ಟಾದರೇನಂತೆ..?

ತಪ್ಪು ಒಪ್ಪುಗಳ ಮರೆತು

ಮತ್ತೆ ಮಗುವಾಗಿ ಆಟವಾಡಬಾರದೆ..?


ವಿಷಯ ಯಾವುದಾದರೇನು..?

ಇಷ್ಟವಾದುದ ಖುಷಿಯಾಗಿ

ಕಲಿತು ಆನಂದಿಸಬಾರದೆ..?


ಮಾನವೀಯತೆ ಹೇಳಿತು

ನಾನಿರುವೆ ನಿಮ್ಮ ನಿಮ್ಮಲ್ಲೇ..

ನಿಮ್ಮ ಹೃದಯ ಮಂದಿರದಲ್ಲಿ..

ಬೇರೆಡೆಯಲ್ಲಿ ಹುಡುಕುವಿರೇಕೆ..?


ಮಾನವ ನನ್ನ ಪೂರ್ಣ ಮರೆತರೆ

ಮನುಜರಿರಬಹುದೇ ಧರಣಿಯಲಿ..?

ಮರೆತು, ಮರೆಯಾಗುವ ಮುನ್ನ

ನನ್ನೊಡಗೂಡಿ ನೀವೂ ಮನುಷ್ಯರಾಗಿ..!



Rate this content
Log in

Similar kannada poem from Tragedy