STORYMIRROR

Lakumikanda Mukunda

Romance Tragedy Inspirational

4  

Lakumikanda Mukunda

Romance Tragedy Inspirational

ಗಜಲ್

ಗಜಲ್

1 min
379


ಬರದಿ ಮನ ಬಿರಿದು ಒಲವ ಹನಿಗಾಗಿ ತಡಕಾಡುವುದೆ ಹುಜೂರ್.

ಶರವೇಗದ ಬಾಣಕ್ಕೆ, ಎದೆ ಸೀಳಿದ ನೋವು ಕಾಡುವುದೆ ಹುಜೂರ್.


ಶರಣಾಗಿ ಶಾಶ್ವತ ದೂರಾದವರೆಲ್ಲ, ಮತ್ತೆಲ್ಲೂ ಕಾಣಲೆ ಇಲ್ಲ.

ಕರುಣೆ ಇಲ್ಲದವರ ಬೇಡಿದ ಬಗೆಗೆ ದೈವವು ಒಲಿಯದೆ ಹುಜೂರ್.


ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ.

ತಾರುಣ್ಯ ಕಳೆದು ಮುಪ್ಪಡರಿ ಮಣ್ಣಾದವರ ಲೆಕ್ಕ ಕಾಣಿಸದೆ ಹುಜೂರ್.


ಉರಿವಾಗ್ನಿಯೊಂದು ಗಾಳಿ ಸೋಕಿ ಝೆಂಕರಿಸಿ ಕುಣಿಯದೆ ಮತ್ತೆ‌‌.

ಸರಿದ ನೆನಪು ಲಕುಮಿಕಂದನ ಕೆಣಕಿ ಕಾಯುವುದೆ ಹುಜೂರ್.


ಕರಿಯಾಳ ಕೈಕಟ್ಟಿ ಹುರಿಯಾಳ ಬೆನ್ತಟ್ಟಿ ಕಳುಹಿದವರ್ಯಾರು ಜಗದಿ.

ಸಿರಿಯ ಭಾವಗಳುಕ್ಕಿ ಮತ್ತೇರಿ ಕೊನೆಗೆ ಕರುವಂತೆ ಕೆನೆಯದೆ ಹುಜೂರ್.




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance