ಬೆಳಗು
ಬೆಳಗು
ಬೆಳಗು ಬೈಗುಗಳ ನಡುವೆ
ಬದುಕು ಸಾಗಿದೆ ಕಂಡಿರಾ?
ಸುಂದರ ಬೆಳಕಿನಾಚೆಗೆ
ಭಂದುರ ಬದುಕಿದೆ ಕಾಣು.
ಹಕ್ಕಿಗಳ ಕಲರವದ ನಿನಾದ
ಸೂರ್ಯರಶ್ಮಿ ಮೈಚಾಚಿದೆ
ರಾತ್ರಿ ಕಳೆದು ಹಗಲಾಗಿದೆ
ಒಲವ ಜಾತ್ರಿ ಶುರುವಾಗಿದೆ.
ಬೆಳಗು ಒಳ್ಳೆಯ ಶಕುನ
ಕನಸುಗಳು ಇಡೇರಿಸಲು
ದುಡಿದು ಸೌಧ ಕಟ್ಟಲು
ಯಶಸ್ಸು ಸಿಗಲಿದೆ ಬೆಳಗಲ್ಲಿ
ಪ್ರಕೃತಿಯೇ ನಸುನಗುವುದು
ಪ್ರತಿ ಮುಂಜಾನೆಯಲ್ಲಿ
ಹೊಸ ಉಲ್ಲಾಸ ಮೂಡಲು
ಹೊಸ ಬಯಕೆ ಈಡೇರಲು..
