ಸ್ವಾತಂತ್ರ್ಯದ ಕಿಡಿ
ಸ್ವಾತಂತ್ರ್ಯದ ಕಿಡಿ
ಸ್ವಾತಂತ್ರ್ಯದ ಕಿಡಿ ಹೊತ್ತಿತೋ...
ಆಂಗ್ಲರ ಸುಟ್ಟು ಹಾಕಿತೋ...
ಶಾಹಿದ್ ಶಾಹಿದ್ ಶಾಹಿದ್ ಭಗತಸಿಂಗ್.!ಪ!
ವೈರಿಗಳೆದೆಯಲಿ ನಡುಕವೋ
ಸ್ವಾತಂತ್ರ್ಯದ ಹುಡುಕಾಟವೋ..
ನೊಂದಿತು ಜೀವ ಬೆಂದಿತು ಭಾವ
ಶಾಹಿದ್ ಶಾಹಿದ್ ಶಾಹಿದ್ ಭಗತಸಿಂಗ್.!
ಇನ್ಕ್ವಿಲಾಬ್ ಜಿಂದಾಬಾದ್!!
ಘೋಷಣೆ ಎಲ್ಲೆಡೆ ಮೋಳಗಲು
ನೆನಪಾಗಿ ಕಾಡಿದ,ನೆಪವಾಗಿ ಕಾಡಿದ
ಶಾಹಿದ್ ಶಾಹಿದ್ ಶಾಹಿದ್ ಭಗತಸಿಂಗ್.!
ರುಧಿರದ ಕುಣಿತಕೆ ಸಾಕ್ಷಿಯು
ತುಂಬಿ ನಿಂತಿದೆ ಅಕ್ಷಿಯು
ಆರದ ದೀಪದಿ ನಂದಲಿ ಶಾಪ
ಶಾಹಿದ್ ಶಾಹಿದ್ ಶಾಹಿದ್ ಭಗತಸಿಂಗ್.!
ಮನೆ ಮನದಲ್ಲೂ ಹುಟ್ಟಲಿ ಮತ್ತೆ
ಎದೆಯ ತುಂಬಲಿ ಧೈರ್ಯವು
ಭಾರತ ದೇಶದ ಹೆಮ್ಮೆಯ ಮಕ್ಕಳ
ಅಮರತೆ(ತ್ಯಾಗ) ಇಂದು ಇತಿಹಾಸವು
ಶಾಹಿದ್ ಶಾಹಿದ್ ಶಾಹಿದ್ ಭಗತಸಿಂಗ್.!
