STORYMIRROR

Ranjitha Ranju

Abstract Tragedy Action

4  

Ranjitha Ranju

Abstract Tragedy Action

ಗಾಂಧಿ ನೋಟ ಅಂದು-ಇಂದು

ಗಾಂಧಿ ನೋಟ ಅಂದು-ಇಂದು

1 min
272


ಅಂದು


ವರ್ಣಬೇಧದಿ ಹೊರದೂಡಿದರು

ಕಂಗೆಡಲಿಲ್ಲ ಕೈಚೆಲ್ಲಲಿಲ್ಲ

ಮರಳಿ ಬಂದು ನ್ಯಾಯ ಪಡೆದರು

ವರ್ಗಬೇದಧಿ ಕೀಳಾಗಿ ಕಂಡರು

ಹಿಂಜರಿಯಲಿಲ್ಲ ಹಿಂದೋಗಲಿಲ್ಲ

ಹರಿಜನ ಎಂದು ಶ್ರೇಷ್ಠತೆಯ ಮೆರೆದರು!


ಅಸಹಕಾರದಿ ಬಿಳಿಯರ ದೂರವಿಟ್ಟು

ಶಾಂತಿಯೆಂಬ ಮಂತ್ರ ತೊಟ್ಟು 

ಅಹಿಂಸೆಯ ಆರತಿ ಬೆಳಗಿ

ಸ್ವಾತಂತ್ರ್ಯದ ಪ್ರಸಾದವನ್ನಿತ್ತರು

ಕುಗ್ಗದೆ ಚಾಟಿ ಏಟಿಗೆ,ಫಿರಂಗಿ ಸದ್ದಿಗೆ

ನಡೆದರು ಮಹಾತ್ಮ ಗಾಂಧೀಜಿ ಅಂದು !!


ಇಂದು


ಬಣ್ಣಕ್ಕಾಗಿ ಬಡಿದಾಟ ಜಾತಿಗಾಗಿ 

ಹೊಡೆದಾಟ

ಎಲ್ಲಿಹುದು ಬಾಪುವಿನ ಅಹಿಂಸಾ ನೀತಿ

ಎಲ್ಲಿಹುದು ಶಾಂತಿ ಸ್ಥಾಪನೆಯ ಸ್ಥಳ

ಬೇಸರದಿ ನಿಂತು ನೋಡುವರು

ಬುದ್ಧಿಹೀನರಿಗೆ ಬೆನ್ನು ತೋರಿಸಿ!


ಗಾಂಧಿಯೆಂದರೆ ಗಾಂಭೀರ್ಯವಿಲ್ಲ

ಪ್ರತಿಮೆಯ ಧೂಳು ತೆಗೆಯುವರಿಲ್ಲ

ಮಹಾತ್ಮರನು ಮರೆತು ಮೋಜಿನಲಿಹರು

ಮುಂದೊದಗುವ ಅಪಾಯ ಮರೆತಿಹರು

ಇಂದು ಗಾಂಧಿ ಕೇವಲ ನಾಲಿಗೆಗಷ್ಟೆ!!




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract