ಸ್ನೇಹ
ಸ್ನೇಹ
ಹಾಸ್ಯ ಹರಟೆ, ಗಲ್ಲಿ ಗಲಾಟೆ
ಲೆಕ್ಕಿಸದ ಹಣ, ದುಃಖಿಸಿದ ಕ್ಷಣ
ಬೇಡದೆ ನೆರವು ,ಬಿದ್ದಾಗ ಬಲವು
ನಲಿವಿನ ಭರ್ತಿ ,ನೋವಿಗೆ ಪ್ರೀತಿ
ಕ್ಷಮಿಸೋ ಮನಸ್ಸು, ಕ್ಷಣಾರ್ಧ ಮುನಿಸು
ಮೋಜಿನ ಬೇಟೆ ಮರೆತಾಗ ಗಂಟೆ
ಸೋಮಾರಿಗಳ ಸಂಘ,
ಗೇಲಿಯ ಮುಖಭಂಗ.
ಸಿರಿವಂತಿಕೆಗೆ ಬೆಲೆ ಇಲ್ಲ,
ಮಚ್ಚ, ಮಗನೇ ಎಲ್ಲಾ
ಸ್ಥಳವಿಲ್ಲ ಸ್ವಾರ್ಥಕ್ಕೆ
ಸಹಾಯವಿಹುದು ಸಂಕಟಕ್ಕೆ
ಹಂಚಿ ತಿನ್ನುವ, ಬಾಂಧವ್ಯ ಕಲಿಸುವ
ಭಾವ ಸಮೂಹ ಈ ಪವಿತ್ರ ಸ್ನೇಹ
ಸ್ನೇಹ ಬೇಕು ಸಂಬಂಧಕ್ಕೆ
ಸ್ನೇಹಿತ ಬೇಕು ಸಂತಸಕ್ಕೆ...
